Saturday, June 6, 2026
Homeಕರಾವಳಿಸುಳ್ಯದಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಬಾಲಕ ಸಾವು

ಸುಳ್ಯದಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಬಾಲಕ ಸಾವು

- Advertisement -
- Advertisement -

ಸುಳ್ಯ: ವೇದಾಧ್ಯಯನ ಮಾಡುತ್ತಿದ್ದ ಬಾಲಕನೊಬ್ಬ ಕಾಲುಜಾರಿ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ ಭಟ್ (18) ಮೃತ ದುರ್ದೈವಿ.

ನಿನ್ನೆ ಸಂಜೆ ವೇದಾಧ್ಯಯನ ತರಗತಿಯ 7 ಜನ ವಿದ್ಯಾರ್ಥಿಗಳೊಂದಿಗೆ ಉದನೇಶ್ವರ ಅರಂಬೂರಿನ ‌ಪಯಸ್ವಿನಿ ನದಿಗೆ ಸ್ನಾನಕ್ಕಿಳಿದಿದ್ದ. ಆ ವೇಳೆ ಉದನೇಶ್ವರ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಆದರೆ ಇದು ಅವರ ಜೊತೆಗೆ ಇದ್ದವರ ಗಮನಕ್ಕೆ ಬಂದಿರಲಿಲ್ಲ.

ಉದನೇಶ್ವರ ಕಾಣದೇ ಇದ್ದರಿಂದ ಆತ ಆಶ್ರಮಕ್ಕೆ ತೆರಳಿರಬೇಕೆಂದು ಭಾವಿಸಿದ್ದರು. ಉದನೇಶ್ವರ ಅವರ ಚಪ್ಪಲಿ ನದಿಯ ಪಕ್ಕದಲ್ಲಿದ್ದುದರಿಂದ ಅನುಮಾನಗೊಂಡು ಆಶ್ರಮದ ಹಿರಿಯರಿಗೆ ತಿಳಿಸಿದರು. ಬಳಿಕ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಡಿದಾಗ ರಾತ್ರಿ ವೇಳೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!