Wednesday, June 3, 2026
Homeಕೊಡಗುವರುಣನ ಆರ್ಭಟಕ್ಕೆ ಭೂಮಿಯೊಳಗೆ ಕಟ್ಟೆ ಸಮೇತ ಕುಸಿದು ಹೋದ ಬಾವಿ

ವರುಣನ ಆರ್ಭಟಕ್ಕೆ ಭೂಮಿಯೊಳಗೆ ಕಟ್ಟೆ ಸಮೇತ ಕುಸಿದು ಹೋದ ಬಾವಿ

- Advertisement -
- Advertisement -

ಕೊಡಗು: ಜಿಲ್ಲೆ ಒಂದೆಡೆ ಪದೇ ಪದೇ ಲಘು ಭೂಕಂಪನವಾಗುತ್ತಿರೋದು ಜನರಲ್ಲಿ ಆತಂಕ ಮೂಡಿಸಿದ್ದರೆ ಮತ್ತೊಂದೆಡೆ ನಿರಂತರ ಮಳೆ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ನಿರಂತರ ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ ಶ್ರೀಮಂಗಲದ ಕುರ್ಚಿ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿದ್ದ ಬಾವಿ ಕಟ್ಟೆ ಸಮೇತ ಭೂಮಿಯೊಳಗೆ ಕುಸಿದು ಹೋಗಿದೆ.

ಮೂರು ವರ್ಷಗಳ ಹಿಂದೆ ಭೂಕುಸಿತದಿಂದಾಗಿ ಕೊಡಗಿನಲ್ಲಿ ಏನೆಲ್ಲಾ ಅವಾಂತರಗಳಾಯ್ತು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆಗ ಉಂಟಾದ ಆಘಾತದಿಂದ ಇನ್ನು ಕೂಡ ಅದೆಷ್ಟೋ ಕುಟುಂಬಗಳು ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಈ ರೀತಿ ಬಾವಿ ಕುಸಿದಿರೋದು ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!