Saturday, June 6, 2026
Homeತಾಜಾ ಸುದ್ದಿವಾರಕ್ಕೊಂದು ದಿನ ತಾಲೂಕು ಕಚೇರಿಗೆ ಭೇಟಿ ನೀಡಲಿದ್ದಾರೆ ಡಿಸಿ: ಕಂದಾಯ ಇಲಾಖೆಯಿಂದ ಹೊಸ ಕಾರ್ಯಕ್ರಮ

ವಾರಕ್ಕೊಂದು ದಿನ ತಾಲೂಕು ಕಚೇರಿಗೆ ಭೇಟಿ ನೀಡಲಿದ್ದಾರೆ ಡಿಸಿ: ಕಂದಾಯ ಇಲಾಖೆಯಿಂದ ಹೊಸ ಕಾರ್ಯಕ್ರಮ

- Advertisement -
- Advertisement -

ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಬಳಿಕ ಕಂದಾಯ ಇಲಾಖೆಯಿಂದ ಮತ್ತೊಂದು ಕಾರ್ಯಕ್ರಮ ಸಿದ್ದವಾಗಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಲು ಯೋಜನೆ ರೂಪುಗೊಂಡಿದೆ.

ವಾರದಲ್ಲಿ ಒಂದು ದಿನ ತಾಲೂಕು ಕಚೇರಿಗೆ ಭೇಟಿ ನೀಡಬೇಕಿದ್ದು, ಪ್ರತಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಲೂಕು ಕಚೇರಿಯಲ್ಲಿದ್ದು ಜನ ಸಾಮಾನ್ಯರ ಸಮಸ್ಯೆಗಳ ಪರಿಶೀಲನೆ ನಡೆಸಬೇಕಿದೆ.‌

ಡಿಸಿಗಳು ಯಾವ ತಾಲೂಕಿನ ಕಚೇರಿಗೆ ಭೇಟಿ ನೀಡಬೇಕು ಎಂದು ಖುದ್ದು ವೇಳಾಪಟ್ಟಿಯನ್ನು ಕಂದಾಯ ಸಚಿವ ಆರ್. ಅಶೋಕ್ ಸಿದ್ದಪಡಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರಗಳು ದೂರ ಇರುವ ಕಾರಣ ಜಿಲ್ಲಾಧಿಕಾರಿಗಳೇ ಜನರ ಬಳಿ ಹೋಗಲು ಈ ಯೋಜನೆ ರೂಪಿಸಿದ್ದು, ಶೀಘ್ರವೇ ಚಾಲನೆ ದೊರೆಯಲಿದೆ.

- Advertisement -

Latest News

error: Content is protected !!