Tuesday, February 27, 2024
Homeಕರಾವಳಿಉಡುಪಿಉಡುಪಿಯಲ್ಲಿ ವೀಕೇರ್ ನ ನೂತನ ಶಾಖೆ ಶುಭಾರಂಭ

ಉಡುಪಿಯಲ್ಲಿ ವೀಕೇರ್ ನ ನೂತನ ಶಾಖೆ ಶುಭಾರಂಭ

spot_img
spot_img
- Advertisement -
- Advertisement -

ಉಡುಪಿ: ವೀಕೇರ್‌ನ ನೂತನ ಶಾಖೆ ಇದೀಗ ಉಡುಪಿಯಲ್ಲಿ ಶುಭಾರಂಭಗೊಂಡಿದೆ. ಇತ್ತೀಚೆಗೆ ವೀಕೇರ್ ಹೋಮ್ ನರ್ಸಿಂಗ್ ಮತ್ತು ಸೆಕ್ಯುರಿಟಿ ಸೊಲ್ಯೂಷನ್ಸ್ನ ನಿರ್ದೇಶಕರಾದ ಸುರಕತ್ ಅಹಮದ್ ಹಾಗೂ ವಿಜೇಶ್ ಕುಮಾರ್ ಅವರು ಜಂಟಿಯಾಗಿ ನೂತನ ಶಾಖೆಯನ್ನ ಉದ್ಘಾಟಿಸಿದರು. ಇನ್ನು ಈ ಸಂಸ್ಥೆ ಜನರಿಗೆ ಮತ್ತು ರೋಗಿಗಳಿಗೆ ದೈನಂದಿನ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸಲುವಾಗಿ ಕಂಪನಿಯ ವಿಸ್ತರಣೆಯ ಭಾಗವಾಗಿ ಉಡುಪಿಯಲ್ಲಿ ತನ್ನ ನೂತನ ಕಚೇರಿಯನ್ನ ತೆರೆದಿದೆ.

ಇನ್ನು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಉಡುಪಿಯು ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಹಾಗಾಗಿ ಉಡುಪಿಯ ಜನರಿಗೆ ವೀಕೇರ್ ಬಹುಮುಖ್ಯವಾಗಿದೆ. ಇಲ್ಲಿ ನೂತನ ಶಾಖೆ ಅನಾವರಣಗೊಂಡಿರುವುದರಿಂದ ಈ ಪ್ರದೇಶದಲ್ಲಿ ತನ್ನ ವ್ಯವಹಾರಕ್ಕೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ, ಇದು ಗೃಹ ಆರೋಗ್ಯ ಮತ್ತು ಭದ್ರತಾ ಸೇವೆಗಳ ಕ್ಷೇತ್ರದಲ್ಲಿ ಆ ಪ್ರದೇಶಕ್ಕೆ ಪರಿಹಾರಗಳು ಮತ್ತು ಸೇವೆಗಳನ್ನು ಒದಗಿಸುವಾಗ ಗ್ರಾಹಕರು ಮತ್ತು ಉದ್ಯೋಗಿಗಳೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಲು ಸಹಾಯವಾಗಲಿದೆ.

ವೀಕೇರ್ 2019 ರಲ್ಲಿ ಸ್ಥಾಪನೆಯಾದ ಐಎಸ್‌ಒ 9001:2015 ಪ್ರಮಾಣೀಕೃತ ಸಂಸ್ಥೆಯಾಗಿದೆ. ಇದರ ಮುಖ್ಯ ಶಾಖೆ ಮಂಗಳೂರಿನ ನಂದಿಗುಡ್ಡಯಲ್ಲಿದೆ, ಕಂಪನಿಯಲ್ಲಿ 250 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಾರೆ, ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ೮೦೦ಕ್ಕೂ ಅಧಿಕ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. ವೀಕೇರ್ ಪ್ರಾಥಮಿಕವಾಗಿ ರೋಗಿಗಳು ಮತ್ತು ವೃದ್ಧರಿಗೆ ಅವರ ಮನೆಯಲ್ಲೇ ಅಥವಾ ಆಸ್ಪತ್ರೆಗಳಲ್ಲೂ ಹೋಮ್ ನರ್ಸ್ಗಳನ್ನು ಒದಗಿಸುವಂತ ಸೇವೆಗಳನ್ನ ಹೊಂದಿದೆ

ಇನ್ನು ರೋಗಿಗಳಿಗೆ ಮನೆಯಲ್ಲೇ ಆರೈಕೆ ನೀಡುವ ಸೇವೆಗಳು ನಮ್ಮಲ್ಲಿ ಇರುವುದರಿಂದ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಹೆಚ್ಚಿನ ಒತ್ತನ್ನ ನೀಡಲಾಗುವುದು. ಜೊತೆಗೆ ಪ್ರತಿಯೊಬ್ಬರ ಮನೆಯ ಆರೈಕೆ ಅಗತ್ಯಗಳಿಗೆ ಪರಿಪೂರ್ಣ ಪರಿಹಾರ ವೀಕೇರ್ ನಿಂದ ಸಾಧ್ಯ. ಹೋಮ್ ಹೆಲ್ತ್ ಕೇರ್ ಸೇವೆಗಳನ್ನು ಸಾಮಾನ್ಯವಾಗಿ ರೋಗಿಗಳ ಕುಟುಂಬದ ಸದಸ್ಯರು ಕೇಳಿಕೊಳ್ಳುವುದು ಸಾಮಾನ್ಯ. ಹಾಗಾಗಿ ರೋಗಿಗಳಿಗೆ ಮನೆಯಲ್ಲಿಯೇ ಇದ್ದು ಅವರ ಸುರಕ್ಷತೆಯನ್ನು ನೋಡಿಕೊಳ್ಳುಲು ಮತ್ತು ಅವರಿಗೆ ಸಹಾಯ ಮಾಡಲು ವೀಕೇರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ,

ನಿಮ್ಮ ಮನೆಯಲ್ಲೇ ಹೋಮ್ ನರ್ಸ್
ಹೋಮ್ ನರ್ಸ್ಗಾಗಿ ಹುಡುಕುತ್ತಿರುವಿರಾ? ಹಾಗಾದ್ರೆ ನಮ್ಮಲ್ಲಿ ಆ ಸೇವೆ ಲಭ್ಯ. ಮಾಸಿಕ ಆಧಾರದ ಮೇಲೆ ಹೋಮ್ ಕೇರ್ ಸೇವೆಗಳನ್ನು ಒದಗಿಸುವಲ್ಲಿಯೂ ವೀಕೇರ್ ಸಂಸ್ಥೆ ಮುಂಚೂಣಿಯಲ್ಲಿದೆ. ನಿಮ್ಮ ಪ್ರೀತಿಪಾತ್ರರಿಗೆ ಹೋಮ್ ಕೇರ್ ಸರಿಯಾದ ಆಯ್ಕೆಯಾಗಿದೆಯೇ ಎಂದು ನಿರ್ಧರಿಸುವುದಾದರೆ ಅದು ವೀಕೇರ್ ಸಂಸ್ಥೆಂಯಿಂದ ಸಾಧ್ಯ. ಹಾಗಾಗಿ ದಿನದ ೨೪ ಗಂಟೆಯೂ ಸೇವೆ ನೀಡುವಲ್ಲಿ ವೀಕೇರ್ ಬಧ್ಧವಿದೆ, ವೀಕೇರ್ ವಿವಿಧ ವರ್ಗಗಳ ನರ್ಸ್ಗಳನ್ನು ಹೊಂದಿದೆ, ಇದರಲ್ಲಿ ಆರೈಕೆದಾರರು, ಎಎನ್ ಎಂ, ಜಿಎನ್ ಎಂ, ಬಿಎಸ್ ಸಿ ಒಳಗೊಂಡಿದೆ. ನಾರ್ಮಲ್ ನಿಂದ ಕ್ರಿಟಿಕಲ್ ವರೆಗಿನ ರೋಗಿಯ ಸ್ಥಿತಿಯನ್ನು ಅವಲಂಬಿಸಿ ಸೂಕ್ತವಾಗಿ ನಿಯೋಜಿಸಬಹುದಾದ ನರ್ಸಿಂಗ್ ಸಿಬ್ಬಂದಿಗಳು ಈ ಸಂಸ್ಥೆಯಲ್ಲಿವೆ.

ಸೆಕ್ಯುರಿಟಿ ಗಾರ್ಡ್ ಸೇವೆಗಳು
ಇನ್ನು ವೀಕೇರ್ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಸೇವೆಗಳು ಲಭ್ಯವಿದೆ. ಉನ್ನತ ಭದ್ರತಾ ಸಂಸ್ಥೆಗಳಲ್ಲಿ ಅನುಭವವಿರುವ ಸೆಕ್ಯೂರಿಟಿ ಗಾರ್ಡ್ಗಳು ನಮ್ಮಲ್ಲಿ ಇರುವುದರಿಂದ ಗ್ರಾಹಕರಿಗೆ ಯಾವುದೇ ರೀತಿಯ ಭದ್ರತಾ ಸೇವೆಯನ್ನು ನೀಡುವಲ್ಲಿ ಸಾಧ್ಯವಿದೆ. ಪರಿಣತಿಯನ್ನು ಹೊಂದಿದ್ದಾರೆ. ವೀಕೇರ್ ತಮ್ಮ ಗ್ರಾಹಕರ ಅಗತ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ಜೊತೆಗೆ ಗ್ರಾಹಕರ ತೃಪ್ತಿಗಾಗಿ ಕಸ್ಟಮೈಸ್ ಮಾಡಿದ ಭದ್ರತಾ ಸೇವೆಗಳನ್ನು ನೀಡಲಾಗುತ್ತದೆ. ನಿಮ್ಮ ಸುರಕ್ಷತೆ ಮತ್ತು ಭದ್ರತೆ ವೀಕೇರ್ ಗೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ವೀಕೇರ್ ಸಂಸ್ಥೆ ತರಬೇತಿ ಪಡೆದ ಮತ್ತು ಶಿಸ್ತುಬದ್ಧ ಭದ್ರತಾ ಸಿಬ್ಬಂದಿಗಳನ್ನ ನೀಡುತ್ತಾರೆ. ತಮ್ಮ ಗ್ರಾಹಕರಿಗೆ ಅವರ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬೆಸ್ಪೋಕ್ ಸೇವೆಯ ಮೂಲಕ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವುದು ನಮ್ಮ ಉದ್ದೇಶ,

ಗೃಹೋಪಯೋಗಿ ಸೇವೆಗಳು
ಇನ್ನು ವೀಕೇರ್ ಸಂಸ್ಥೆಯಿಂದ ಗೃಹೋಪಯೋಗಿ ಸೇವೆಗಳು ಕೂಡ ಲಭ್ಯವಿದೆ. ವಸತಿ ಅಪಾರ್ಟ್ಮೆಂಟ್‌ಗಳು, ವಾಣಿಜ್ಯ ಸಂಕೀರ್ಣ, ಕಚೇರಿ, ಶಾಲೆ, ಕಾಲೇಜು, ಶೋರೂಮ್ ಮತ್ತು ಹೋಟೆಲ್ ಹೌಸ್‌ಕೀಪಿಂಗ್ ಗೂ ನಮ್ಮಲ್ಲಿ ಸೇವೆಗಳಿವೆ. ಇದಕ್ಕಾಗಿ ವಾರ್ಷಿಕ ನಿರ್ವಹಣೆ ಒಪ್ಪಂದಗಳನ್ನು ಗ್ರಾಹಕರಲ್ಲಿ ಮಾಡಿಕೊಳ್ಳುತ್ತೇವೆ. ಶುಚಿಗೊಳಿಸುವ ವಿಧಾನಗಳನ್ನು ಒಳಗೊಂಡಿರುವ ಮಾಡ್ಯೂಲ್‌ಗಳಿವೆ. ಪರಿಸರವನ್ನ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ನೋಡಿಕೊಳ್ಳಲು. ಜೊತೆಗೆ ರೋಗಾಣು ಮುಕ್ತ ಹಾಗೂ ಸೋಂಕುರಹಿತವಾಗಿ ನೋಡಿಕೊಳ್ಳಲು ವೀಕೇರ್ ತಂಡ ಮತ್ತು ಸಿಬ್ಬಂದಿಗಳು ತರಬೇತಿ ಕೂಡ ನೀಡುತ್ತಾರೆ. ವಾಣಿಜ್ಯ ಮತ್ತು ವಸತಿ ವಲಯಗಳಿಗೆ ಶುಚಿಗೊಳಿಸುವ ಸೇವೆಗಳನ್ನು ಒದಗಿಸುತ್ತಾರೆ. ವಿವಿಧ ವಿಭಾಗಗಳ ಸಿಬ್ಬಂದಿ ಮತ್ತು ತಂಡವನ್ನು ವಿವಿಧ ವಲಯಗಳಿಗೆ ನೇಮಿಸಿಕೊಳ್ಳುತ್ತಾರೆ ಮತ್ತು ತರಬೇತಿ ನೀಡುತ್ತಾರೆ. ಮಾಸಿಕ ಒಪ್ಪಂದದ ಆಧಾರದ ಬೆಲೆಗಳಲ್ಲಿ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದ್ದಾರೆ.

ದಾದಿ ಕೇರ್ ಸೇವೆಗಳು
ಇನ್ನು ವೀಕೇರ್ ಸಂಸ್ಥೆ ದಾದಿ ಕೇರ್ ಸೇವೆಗಳನ್ನು ಪ್ರಾರಂಭಿಸಿದೆ. ಮಕ್ಕಳ ಆರೈಕೆಯನ್ನು ನೋಡಿಕೊಳ್ಳಲು ದಾದಿಯರನ್ನು ಪೋಷಕರು ನೇಮಿಸಿಕೊಳ್ಳುತ್ತಾರೆ. ದಾದಿಯರು ತಮ್ಮ ಆರೈಕೆಯಲ್ಲಿರುವ ಮಕ್ಕಳ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಅಗತ್ಯಗಳನ್ನು ಪೂರೈಸುತ್ತಾರೆ. ಹಾಗಾಗಿ ಈ ಸೇವೆಯನ್ನು ವೀಕೇರ್ ಮೂಲಕ ಪ್ರಾರಂಭಿಸಲಾಗಿದೆ.
ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು ಹುಡುಕುವುದು ಸುಲಭದ ಕೆಲಸವಲ್ಲ. ಹಾಗಾಗಿ ವೀಕೇರ್ ನಲ್ಲಿ ದಾದಿಯರು ಅಚ್ಚುಕಟ್ಟಾಗಿ ಹೆಜ್ಜೆ ಹಾಕುತ್ತಾರೆ. ಪರಿಪೂರ್ಣ ಬೇಬಿಸಿಟ್ಟರ್ ಅನ್ನು ಹುಡುಕಲು ವೀಕೇರ್ ಸಂಸ್ಥೆ ಒಂದು ಸುಲಭದ ಮಾರ್ಗವಾಗಿದೆ. ಮನೆಯಲ್ಲಿ ಮಕ್ಕಳ ಆರೈಕೆಗಾಗಿ ಅನುಭವಿ ದಾದಿಯರು ನಮ್ಮಲ್ಲಿ ಇದ್ದಾರೆ. ಅವರು ಮಕ್ಕಳ ವಯಸ್ಸಿಗೆ ಸೂಕ್ತವಾದಂತೆ ವಿವಿಧ ಚಟುವಟಿಕೆಯ ಮೂಲಕ ಗಮನಹರಿಸುತ್ತಾರೆ, ಇದು ಜೀವನದ ವಿವಿಧ ಅಂಶಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಹಾಯವಾಗುತ್ತೆ.

- Advertisement -

Latest News

error: Content is protected !!