Wednesday, June 24, 2026
Homeಕರಾವಳಿಉಡುಪಿಹಿಜಾಬ್ ವಿಚಾರವಾಗಿ ಏನೇ ತೀರ್ಪು ಬಂದರೂ ಸ್ವಾಗತ: ಆದರೆ ಶಾಲಾ- ಕಾಲೇಜುಗಳಲ್ಲಿ ಯಾವುದೇ ಧರ್ಮದ ವಸ್ತ್ರ...

ಹಿಜಾಬ್ ವಿಚಾರವಾಗಿ ಏನೇ ತೀರ್ಪು ಬಂದರೂ ಸ್ವಾಗತ: ಆದರೆ ಶಾಲಾ- ಕಾಲೇಜುಗಳಲ್ಲಿ ಯಾವುದೇ ಧರ್ಮದ ವಸ್ತ್ರ ಸಂಹಿತೆಗೆ ಅವಕಾಶ ಇಲ್ಲ:  ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಹಿಜಾಬ್ ವಿಚಾರವಾಗಿ ಏನೇ ತೀರ್ಪು ಬಂದರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಹೈಕೋರ್ಟ್ ಈ ಹಿಂದೆ ಏನು ಆದೇಶ ಹೊರಡಿಸಿತ್ತೋ ಅದನ್ನೇ ಮುಂದುವರಿಸುತ್ತೇವೆ, ಶಾಲಾ ಕಾಲೇಜುಗಳಲ್ಲಿ ಈಗಿರುವ ನಿಯಮವೇ ಮುಂದುವರಿಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಬಿ.ಸಿ. ನಾಗೇಶ್, ಬಿಜೆಪಿ ಡೆಮಾಕ್ರಟಿಕ್ ಪಾರ್ಟಿಯಾಗಿದ್ದು, ಸಂವಿಧಾನದ ಆಶಯಗಳನ್ನು ಗೌರವಿಸುತ್ತದೆ, ಒಂದು ಒಳ್ಳೆಯ ತೀರ್ಪು ಬರುವ ನಿರೀಕ್ಷೆ ಹುಸಿಯಾಗಿದೆ ಎಂದಿದ್ದಾರೆ.

ಅಲ್ಲದೇ ಈಗಿನ ಹೈಕೋರ್ಟ್ ತೀರ್ಪಿನ ಪ್ರಕಾರ ಯಥಾಸ್ಥಿತಿ ಮುಂದುವರೆಯಲಿದೆ, ಶಾಲಾ- ಕಾಲೇಜುಗಳಲ್ಲಿ ಯಾವುದೇ ಧರ್ಮದ ವಸ್ತ್ರ ಸಂಹಿತೆಗೆ ಅವಕಾಶ ಇಲ್ಲ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ.

- Advertisement -

Latest News

error: Content is protected !!