Wednesday, June 24, 2026
HomeUncategorizedನಮ್ಮ ಸರ್ಕಾರ ಬಂದ ಬಳಿಕ ಎಲ್ಲಾ ಮೂಲ ಹೆಸರನ್ನೇ ಇಡುತ್ತೇವೆ; ವಿಪಕ್ಷ ನಾಯಕ ಆರ್ ಅಶೋಕ್...

ನಮ್ಮ ಸರ್ಕಾರ ಬಂದ ಬಳಿಕ ಎಲ್ಲಾ ಮೂಲ ಹೆಸರನ್ನೇ ಇಡುತ್ತೇವೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

- Advertisement -
- Advertisement -

ಬೆಂಗಳೂರು: ನಮ್ಮ ಸರ್ಕಾರ ಬಂದ ಬಳಿಕ ಎಲ್ಲಾ ಮೂಲ ಹೆಸರನ್ನೇ ಇಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ತುಮಕೂರಿಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರು ಹೆಸರು ಸೇರಿಸಿಕೊಳ್ಳುವುದು ಈಗ ಸ್ಪರ್ಧೆ. ಇಡೀ ಕರ್ನಾಟಕಕ್ಕೆ ಬೆಂಗಳೂರು ಅಂತಾ ಇಟ್ಟುಬಿಡಿ. ಅಭಿವೃದ್ಧಿ ಮಾಡದೇ ಬೆಂಗಳೂರು ಹೆಸರು ತೆಗೆದುಕೊಂಡು ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಹೆಸರನ್ನು ಬೇರೆ ಕಡೆ ಹಂಚಿದರೆ ಬೆಂಗಳೂರು ಜನ ನಿಮಗೆ ಶಾಪ ಹಾಕುತ್ತಾರೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸೋತು ಹೋಗುತ್ತೀರಿ ಎಂದು ಭವಿಷ್ಯ ನುಡಿದಿದ್ದಾರೆ.

- Advertisement -

Latest News

error: Content is protected !!