Sunday, June 7, 2026
Homeತಾಜಾ ಸುದ್ದಿಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಯತ್ನ - ವಾಟಾಳ್ ನಾಗರಾಜ್ ಬಂಧನ!..

ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಯತ್ನ – ವಾಟಾಳ್ ನಾಗರಾಜ್ ಬಂಧನ!..

- Advertisement -
- Advertisement -

ಮೈಸೂರು : ಇಂದು ಸರ್ಕಾರ ಅತಿ ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ, ಮೈಸೂರಿನಲ್ಲಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.


ಚಾಮುಂಡೇಶ್ವರಿ ತಾಯಿ ಭಾವಚಿತ್ರ ಇಟ್ಟು ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರಾ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ವಾಟಾಳ್ ನಾಗರಾಜ್, ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬ್ಯಾಂಡ್ ಸೆಟ್ ಸಾರೋಟು ವಶಕ್ಕೆ ಪಡೆಡಿದ್ದಾರೆ.ಇದರಿಂದ ತೀವ್ರ ಕೆರಳಿದ ವಾಟಾಳ್ ನಾಗರಾಜ್ ರವರು ಸರ್ಕಾರದ ಕ್ರಮವನ್ನ ಖಂಡಿಸಿ ಮುಖ್ಯಮಂತ್ರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

- Advertisement -

Latest News

error: Content is protected !!