Sunday, June 28, 2026
Homeತಾಜಾ ಸುದ್ದಿಮಹಾರಾಷ್ಟ್ರ: ಉಪಮುಖ್ಯಮಂತ್ರಿಗೂ ಕೊರೋನಾ ಸೋಂಕು ದೃಢ

ಮಹಾರಾಷ್ಟ್ರ: ಉಪಮುಖ್ಯಮಂತ್ರಿಗೂ ಕೊರೋನಾ ಸೋಂಕು ದೃಢ

- Advertisement -
- Advertisement -

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‍ಸಿಪಿ ನಾಯಕ ಅಜಿತ್ ಪವಾರ್ ಅವರಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಪವಾರ್ ಅವರಿಗೆ ಮುಂಬೈನ ಪ್ರತಿಷ್ಠಿತಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಜಿತ್ ಪವಾರ್, ‘ನನಗೆ ನಡೆಸಿದ ಕೊರೋನಾ ಪರೀಕ್ಷೆ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರ ಸಲಹೆ ಮೇರೆಗೆ ಬ್ರೀಚ್​ ಕ್ಯಾಡಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಪಕ್ಷದ ನಾಯಕರು, ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ. ಸ್ವಲ್ಪ ವಿಶ್ರಾಂತಿ ಬಳಿಕ ಶೀಘ್ರದಲ್ಲೇ ನಿಮ್ಮ ಜೊತೆಗೆ ಇರುತ್ತೇನೆ’ ಅಂತ ಹೇಳಿದ್ದಾರೆ.

ಅಂದ್ಹಾಗೆ ಎನ್​ಸಿಪಿಯ ಅಜಿತ್ ಪವಾರ್​ಗೆ 61 ವರ್ಷ ವಯಸ್ಸಾಗಿದೆ. ಕಳೆದ ಗುರುವಾರ ಅವರಿಗೆ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಇದೀಗ ಪಾಸಿಟಿವ್ ಬಂದಿದೆ.

ಅಜಿತ್ ಪವಾರ್ ಸೇರಿ ಮಹಾರಾಷ್ಟ್ರದಲ್ಲಿ 15ಕ್ಕೂ ಅಧಿಕ ಸಚಿವರು ಈಗಾಗಲೇ ಸೋಂಕಿಗೆ ಒಳಗಾದಂತಾಗಿದೆ. ಎರಡು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡ್ನವಿಸ್​ ಅವರಲ್ಲಿ ಸೋಂಕು ದೃಢಪಟ್ಟಿತ್ತು.

- Advertisement -

Latest News

error: Content is protected !!