Friday, April 26, 2024
Homeತಾಜಾ ಸುದ್ದಿತನ್ನ ಪತ್ನಿಯರೊಂದಿಗಿನ ಸೆಕ್ಸ್ ದೃಶ್ಯವನ್ನು ಲೈವ್ ಪ್ರಸಾರ ಮಾಡುತ್ತಿದ್ದ ಗಂಡನ ಬಂಧನ

ತನ್ನ ಪತ್ನಿಯರೊಂದಿಗಿನ ಸೆಕ್ಸ್ ದೃಶ್ಯವನ್ನು ಲೈವ್ ಪ್ರಸಾರ ಮಾಡುತ್ತಿದ್ದ ಗಂಡನ ಬಂಧನ

spot_img
- Advertisement -
- Advertisement -

ಭೋಪಾಲ್: ಹಣದ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪತ್ನಿಯರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಲೈವ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಪಟ್ಟಣದಲ್ಲಿ ನಡೆದಿದೆ.

ಪತ್ನಿಯರೊಂದಿಗೆ ಸೆಕ್ಸ್​ ವಿಡಿಯೋವನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದ ಆರೋಪಿ ಹೆಸರು ಚರಣ್‍ಜೀತ್. ಹತ್ತನೇ ತರಗತಿವರೆಗೆ ಓದಿಕೊಂಡಿರುವ ಈತ, ವಿವಿಧ ಆಯಪ್‍ಗಳ ಮೂಲಕ ಸೆಕ್ಸ್​ ಲೈವ್ ಶೋ ನಡೆಸುತ್ತಿದ್ದ. ಈ ದೃಶ್ಯವನ್ನು ಲೈವ್​ ಆಗಿ ವೀಕ್ಷಿಸಲು ಗ್ರಾಹಕರಿಗೆ 100 ರೂ. ನಿಂದ 1 ಸಾವಿರದ ವರೆಗೂ ದರ ನಿಗದಿ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

ಆರೋಪಿಯ 2ನೇ ಪತ್ನಿ ಅಕ್ಟೋಬರ್ 21ರಂದು ನೀಡಿದ ದೂರಿನ ಮೇರೆಗೆ ಶನಿವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಕ್ಷಕರಿಗೆ ಖಾಸಗಿ ಕ್ಷಣಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸುವ ಮೂಲಕ ಲೈಂಗಿಕ ಹಿಂಸೆ ಹಾಗೂ ಬೆದರಿಕೆ, ಅತ್ಯಾಚಾರ ಮತ್ತು ಗೌಪ್ಯತೆಯ ಉಲ್ಲಂಘನೆ ಆರೋಪಗಳನ್ನು ಬಂಧಿತ ಎದುರಿಸುತ್ತಿದ್ದಾನೆ.

ಆರೋಪಿ ಚರಣ್​ಜೀತ್​, ಆಯಪ್‍ಗಳಲ್ಲಿ ಡಿಪಿ ಸೆಟ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ತಕ್ಷಣ ವೀಕ್ಷಕರ ಮೊಬೈಲ್‍ಗೆ ಪ್ರತ್ಯೇಕ ಸಂದೇಶ ಹೋಗುತಿತ್ತು. ಅಲ್ಲಿ 100 ರೂ.ಗೆ ಡೆಮೋ ನೋಡಬಹುದಿತ್ತು. ಲೈವ್ ನೋಡಲು 500 ರೂ., 700 ರೂ., 1000 ರೂ. ಪಾವತಿಸಬೇಕಿತ್ತು. ಮುಖ ಕಾಣಿಸದೆ ಹಾಗೂ ಕಾಣಿಸುವಂತೆಯೂ ವಿಡಿಯೋ ನೋಡಲು ಗ್ರಾಹಕರಿಗೆ ಅವಕಾಶವಿತ್ತು. ಈ ದಂಧೆಯಲ್ಲಿ ಆರೋಪಿ ಪ್ರತಿದಿನ 3 ರಿಂದ 4 ಸಾವಿರ ರೂ. ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ಮೊದಲ ಪತ್ನಿ ಬೆಂಗಳೂರು ಮೂಲದವರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 2ನೇ ಪತ್ನಿ ಉತ್ತರ ಪ್ರದೇಶದ ನಿವಾಸಿದ್ದು, ಆಕೆಗೆ ತಾನು ಅಪಾರ ದೈವ ಭಕ್ತ ಎಂದು ಹೇಳಿ ಮೋಸ ಮಾಡಿ ಮದುವೆಯಾಗಿದ್ದ. ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಿದ್ರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಪತಿಯ ಕೃತ್ಯದಿಂದ ಬೇಸತ್ತ ಮಹಿಳೆ ಅಕ್ಟೋಬರ್ 21ರಂದು ವಿಧಿಶಾ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಳು. ಆದ್ರೆ ಈ ಮೊದಲೇ ಆಗಿರುವ ಮದುವೆ ವಿಷಯ ಹೇಳಿರಲಿಲ್ಲ. ಮದುವೆ ಬಳಿಕ ತನ್ನ ಕೆಲ ಖಾಸಗಿ ವೀಡಿಯೋ ಸೆರೆ ಹಿಡಿದ ಚರಣ್ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಫೋಟೋ ಮತ್ತು ವೀಡಿಯೋಗಳನ್ನ ತೋರಿಸಿ ಆ್ಯಪ್ ನಲ್ಲಿ ಲೈಂಗಿಕ ಕ್ರಿಯೆ ನೀಡುವಂತೆ ತನಗೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -
spot_img

Latest News

error: Content is protected !!