Tuesday, May 14, 2024
Homeಕರಾವಳಿಬೆಳ್ತಂಗಡಿ : ಇನ್ಸ್ಪೆಕ್ಟರ್ ಸತ್ಯನಾರಾಯಣ ತಂಡದ ಕಾರ್ಯಾಚರಣೆ: ಮೂವರು ವಾರೆಂಟ್ ಆರೋಪಿಗಳ ಬಂಧನ                  

ಬೆಳ್ತಂಗಡಿ : ಇನ್ಸ್ಪೆಕ್ಟರ್ ಸತ್ಯನಾರಾಯಣ ತಂಡದ ಕಾರ್ಯಾಚರಣೆ: ಮೂವರು ವಾರೆಂಟ್ ಆರೋಪಿಗಳ ಬಂಧನ
                  

spot_img
- Advertisement -
- Advertisement -

ಬೆಳ್ತಂಗಡಿ : ಪ್ರಕರಣದ ಸಂಬಂಧ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಬೆಳ್ತಂಗಡಿ ಪೊಲೀಸ್ ಠಾಣೆಯ  ಇನ್ಸ್ಪೆಕ್ಟರ್ ಸತ್ಯನಾರಾಯಣ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ-1:  ಸಿ.ಸಿ ನಂಬರ್ 60/16 ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 138/15 ಕಲಂ. 457. 380, ಜೊತೆಗೆ 34 ಐ ಪಿ. ಸಿ.ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ  ಪ್ರೊಕ್ಲ ಮೇಶನ್ ಆಸಾಮಿ ಸುಭಾಸ್ ಗೊಸಾವಿ (32) ಎಂಬಾತನನ್ನು ಮಾರ್ಚ್ 3 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ವ್ರಷಭ ಹಾಗು ಬಸವರಾಜ್ ರವರು ಹಾವೇರಿ ಜಿಲ್ಲೆಯಿಂದ ವಶಕ್ಕೆ ಪಡೆದು ಮಾರ್ಚ್ 4 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು‌. ಈ ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು. ಸಂಬಂಧಿಸಿದ ವೈದ್ಯರ ದಾಖಲಾತಿಗಳನ್ನು ಪರಿಶೀಲಿಸಿ ಮಾನ್ಯ ನ್ಯಾಯಾಲಯವು ಷರತ್ತು ಬದ್ದ ಜಾಮೀನಿನಲ್ಲಿ ಬಿಡುಗಡೆಗೊಳಿಸಿರುತ್ತದೆ.

ಪ್ರಕರಣ-2:ಸಿ.ಸಿ ನಂಬರ್ 590/2022.  ಕಲಂ.138 NI ಆಕ್ಟ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ  ವಾರಂಟು ಆಸಾಮಿ ಬಾಬಾ ಜಾನ್ ಪಯ್ಜುಲ್ಲ  ರಾಬ್ಬಾನಿ(45) ಎಂಬಾತನನ್ನು ಮಾರ್ಚ್ 3 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವ್ರಷಭ ಹಾಗೂ ಬಸವರಾಜ್ ರವರು ಹಾವೇರಿ ಜಿಲ್ಲೆ, ರಾಣಿಬೆನ್ನೂರುನಿಂದ ವಶಕ್ಕೆ ಪಡೆದು ಮಾರ್ಚ್ 4 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ‌.

ಪ್ರಕರಣ-3 : ಸಿ.ಸಿ ನಂಬರ್ 157/2022. ಕಲಂ.138 NI ಆಕ್ಟ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ  ವಾರಂಟು ಆರೋಪಿಯಾದ ದೀಕ್ಷಿತ್ ಕುಮಾರ್ (35) ಎಂಬಾತನನ್ನು ಮಾರ್ಚ್ 4 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ವ್ರಷಭ ಹಾಗು ಬಸವರಾಜ್ ರವರು ಬೆಳ್ತಂಗಡಿಯಿಂದ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಮೂವರು ಆರೋಪಿಗಳ ಬಂಧನಕ್ಕೆ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್-2 ಅರ್ಜುನ್ ಮತ್ತು ಸಬ್ ಇನ್ಸ್ಪೆಕ್ಟರ್-1 ಹರೀಶ್ ರವರ ನೇತೃತ್ವದಲ್ಲಿ ಸಿಬ್ಬಂದಿ ವೃಷಭ , ಬಸವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!