Thursday, June 4, 2026
Homeಕರಾವಳಿ20 ವರ್ಷಗಳಿಂದ ಕೊರಗಜ್ಜನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದ  ಖಾಸೀಂ ಸಾಹೇಬ್ ನಿಧನ

20 ವರ್ಷಗಳಿಂದ ಕೊರಗಜ್ಜನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದ  ಖಾಸೀಂ ಸಾಹೇಬ್ ನಿಧನ

- Advertisement -
- Advertisement -

ಮಂಗಳೂರು: 20 ವರ್ಷಗಳಿಂದ ಕೊರಗಜ್ಜನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದ  ಖಾಸೀಂ ಸಾಹೇಬ್(66) ನಿಧನರಾಗಿದ್ದಾರೆ. ಖಾಸೀಂ ಸಾಹೇಬ್ ಮೂಲತಃ ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು.


35 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದ ಕೇರಳದ ಪಲಕ್ಕಾಡ್‌ ಜಿಲ್ಲೆಯ ಚಿತ್ತಲೆಂಚೇರೆ ಪಿ ಕಾಸಿಂ ಸಾಬ್‌ ಮಂಗಳೂರು ಹೊರವಲಯ ಮೂಲ್ಕಿಯ ಬಳ್ಕುಂಜೆಯಲ್ಲಿ ಕೊರಗಜ್ಜನ ದೈವಸ್ಥಾನ ನಿರ್ಮಿಸಿ ಆರಾಧಿಸುತ್ತಿದ್ದರು.


ಈ ದೈವಸ್ಥಾನಕ್ಕೆ ಗ್ರಾಮ ಹಾಗೂ ಸುತ್ತಮುತ್ತಲಿನ ವಿವಿಧ ಜಾತಿ, ವಿವಿಧ ಧರ್ಮದ ಜನ ಬಂದು ಕೊರಗಜ್ಜನಿಗೆ ಆರಾಧನೆ ಸಲ್ಲಿಸುತ್ತಿದ್ದಾರೆ. ಕಾಸಿಂ ಸಾಬ್‌ ಪ್ರತಿದಿನ ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.ಆ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದರು.

- Advertisement -

Latest News

error: Content is protected !!