Monday, April 29, 2024
Homeಪ್ರಮುಖ-ಸುದ್ದಿಐಫೋನ್ ಹ್ಯಾಕ್ ಕುರಿತು ಎಚ್ಚರಿಕೆಯ ಸಂದೇಶ; ಪತ್ರಕರ್ತರು ಸೇರಿದಂತೆ ಹಲವು ವಿಪಕ್ಷ ನಾಯಕರ ಫೋನ್ ಹ್ಯಾಕ್!

ಐಫೋನ್ ಹ್ಯಾಕ್ ಕುರಿತು ಎಚ್ಚರಿಕೆಯ ಸಂದೇಶ; ಪತ್ರಕರ್ತರು ಸೇರಿದಂತೆ ಹಲವು ವಿಪಕ್ಷ ನಾಯಕರ ಫೋನ್ ಹ್ಯಾಕ್!

spot_img
- Advertisement -
- Advertisement -

ವಿರೋಧ ಪಕ್ಷ ನಾಯಕರು ಸೇರಿದಂತೆ ಇಬ್ಬರು ಪತ್ರಕರ್ತರ ಐಫೋನ್‌ಗಳನ್ನು ಪ್ರಾಯೋಜಿತ ದಾಳಿಕೋರರು ಹ್ಯಾಕ್ ಮಾಡಿರಬಹುದು ಎಂದು ಆಪಲ್ ಮೊಬೈಲ್ ಕಂಪನಿಯು ಎಚ್ಚರಿಕೆ ನೀಡಿದೆ.

ಈಗಾಗಲೇ ಬೆದರಿಕೆ ಕುರಿತ ಸಂದೇಶವನ್ನು ತೃಣಮೂಲ ಕಾಂಗ್ರೆಸ್‌ ಲೋಕಸಭಾ ಸಂಸದ ಮಹುವಾ ಮೊಯಿತ್ರಾ, ಆಲ್ ಇಂಡಿಯಾ ಮಜ್ಜಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ನಾಯಕ ಶಶಿ ತರೂರ್, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಪವನ್ ಖೇರಾ, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸುಪ್ರಿಯಾ ಶ್ರೀನಾಟೆ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಪ್ರಿಯಾಂಕಾ ಚತುರ್ವೇದಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸ್ವೀಕರಿಸಿದ್ದರ ಬಗ್ಗೆ ಬರೆದಿದ್ದಾರೆ.

ಅಬ್ಬರ್ವರ್ ರಿಸರ್ಚ್ ಫೌಂಡೇಶನ್‌ ಅಧ್ಯಕ್ಷ ಸಮೀ‌ ಸರನ್ ಮತ್ತು ಡೆಕ್ಕನ್ ಕ್ರಾನಿಕಲ್ ರೆಸಿಡೆಂಟ್ ಎಡಿಟರ್ ಶ್ರೀರಾಮ್ ಕದ್ರಿ ಅವರು ಆಪಲ್‌ನಿಂದ ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. ಅದರ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ) ನಾಯಕ ಸೀತಾರಾಂ ಯೆಚೂರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆಮ್ ಆದ್ಮ ಪಕ್ಷದ ನಾಯಕ ರಾಘವ್ ಚಡ್ಡಾ ಅವರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಈ ಎಚ್ಚರಿಕೆ ಸಂದೇಶ ಸ್ವತಂತ್ರ ಪತ್ರಿಕೋದ್ಯಮಿ ರೇವತಿಗೂ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಎಕ್ಸಾನಲ್ಲಿ ಪೋಸ್ಟ್ ಮಾಡಿರುವ ಅವರು, “ಕಳೆದ ಕೆಲವು ದಿನಗಳಿಂದ ಅವರುಗಳ ಫೋನ್ ಬ್ಯಾಟರಿಯಿಂದ ಬೇಗ ಖಾಲಿಯಾಗುತ್ತಿದೆ ಮತ್ತು ವಿಚಿತ್ರವಾಗಿ ವರ್ತಿಸುತ್ತಿದೆ. ಇದು ಮೊದಲ ಬಾರಿ ಅಲ್ಲ!” ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!