Wednesday, June 3, 2026
Homeಚಿಕ್ಕಮಗಳೂರುವಕ್ಫ್‌ ಬೋರ್ಡ್ ಕಂಡವರ ಆಸ್ತಿಗೆ ಕಣ್ಣು ಹಾಕುವ ಕೆಲಸ ಮಾಡುತ್ತಿದೆ: ಸಿ.ಟಿ ರವಿ

ವಕ್ಫ್‌ ಬೋರ್ಡ್ ಕಂಡವರ ಆಸ್ತಿಗೆ ಕಣ್ಣು ಹಾಕುವ ಕೆಲಸ ಮಾಡುತ್ತಿದೆ: ಸಿ.ಟಿ ರವಿ

- Advertisement -
- Advertisement -

ಚಿಕ್ಕಮಗಳೂರು: ಈಗಗಾಲೇ ರಾಜ್ಯದ್ಯಾಂತ ವಕ್ಫ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಈ ಕುರಿತಂತೆ ಸಿ.ಟಿ ರವಿ  ಅನ್ವರ್ ಮಾನಪ್ಪಾಡಿ ವರದಿಯಲ್ಲಿ ದಾನದ ಆಸ್ತಿಯನ್ನು ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿರುವುದು ಉಲ್ಲೇಖವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ. ದಾನದ ಆಸ್ತಿಯನ್ನು ದುರ್ಬಳಕೆ ಮಾಡಿದ್ದು, ನಾವು ಆ ಆಸ್ತಿಯನ್ನು ಉಳಿಸಿ ಎಂದು ಹೇಳಿರುವುದು ನಿಜ. ವಕ್ಫ್‌ ಬೋರ್ಡ್ ಕಂಡವರ ಆಸ್ತಿಗೆ ಕಣ್ಣು ಹಾಕುವ ಕೆಲಸ ಮಾಡುತ್ತಿದೆ. ದೇವಸ್ಥಾನ, ವಿಧಾನಸೌಧ, ಸಂಸತ್ತು ಎಲ್ಲಾ ನಮ್ದು ಎನ್ನುವುದು ಬಕಾಸುರ ಸಂಸ್ಕೃತಿ ಎಂದು ಹೇಳಿದ್ದು ನಾನು. ರೈತರ ಆಸ್ತಿ, ದೇವಸ್ಥಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಕೆರೆಯನ್ನು ಅತಿಕ್ರಮಿಸಿಕೊಳ್ಳಲು ಯಾವತ್ತೂ ಆದೇಶಿಸಿಲ್ಲ.,’ ಎಂದರು.

‘ವಕ್ಫ್ ಬೋರ್ಡ್ ಪ್ರಕರಣದಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗೆ 1500 ವರ್ಷದ ದೇವಸ್ಥಾನವನ್ನು ಅತಿಕ್ರಮಿಸಿ ಎಂದು ಹೇಳಿತ್ತಾ? ರೈತರ 18 ಸಾವಿರ ಎಕರೆ ದಾಖಲೆ ಇಲ್ಲದೆ ವಕ್ಫ್‌ ಬೋರ್ಡ್‌ ಮಾಡಲಿಕ್ಕೆ ನಾವು ಹೇಳಿದ್ದೇವಾ? ಎಂದು ಪ್ರಶ್ನಿಸಿದರು.

- Advertisement -

Latest News

error: Content is protected !!