Tuesday, June 9, 2026
Homeಅಪರಾಧಬಿಸಿರೋಡಿನಲ್ಲಿ ರೈಲ್ವೇ ಇಲಾಖೆಯ ವಿದ್ಯುತ್‌ ಕೇಬಲ್‌ಗ‌ಳ ಕಳ್ಳತನ ಪ್ರಕರಣ; ಕಳ್ಳರ ಪತ್ತೆಗೆ ರೈಲ್ವೇ ಸಂರಕ್ಷಣ ಪಡೆ ಕಾರ್ಯಾಚರಣೆ

ಬಿಸಿರೋಡಿನಲ್ಲಿ ರೈಲ್ವೇ ಇಲಾಖೆಯ ವಿದ್ಯುತ್‌ ಕೇಬಲ್‌ಗ‌ಳ ಕಳ್ಳತನ ಪ್ರಕರಣ; ಕಳ್ಳರ ಪತ್ತೆಗೆ ರೈಲ್ವೇ ಸಂರಕ್ಷಣ ಪಡೆ ಕಾರ್ಯಾಚರಣೆ

- Advertisement -
- Advertisement -

ಬಂಟ್ವಾಳ: ಬಿ.ಸಿ. ರೋಡಿನ ಮೊಡಂಕಾಪು ಪರಿಸರದಲ್ಲಿ ರೈಲ್ವೇ ಇಲಾಖೆಯ ವಿದ್ಯುತ್‌ ಕೇಬಲ್‌ಗ‌ಳ ಕಳ್ಳತನ ಪ್ರಕರಣಗಳು ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಕಳ್ಳರ ಪತ್ತೆಗೆ ರೈಲ್ವೇ ಸಂರಕ್ಷಣ ಪಡೆ ಕಾರ್ಯಾಚರಣೆಗೆ ಇಳಿದಿದೆ.

ಇನ್ನು ಕಳ್ಳತನವಾದ ಕೇಬಲ್ ಗಳ ಮೊತ್ತದ ಬಗ್ಗೆ ಪ್ರಕರಣವನ್ನು ಬೇಧಿಸಿದ ಬಳಿಕವೇ ನಿಖರವಾದ ಮಾಹಿತಿ ಸಿಗಬೇಕಾಗಿದೆ. 

ರೈಲ್ವೇ ಇಲಾಖೆ ಅಧೀನದಲ್ಲಿ ರೈಲ್ವೇ ಸಂರಕ್ಷಣ ಪಡೆ ಕಾರ್ಯನಿರ್ವಹಿಸುತ್ತಿದ್ದು, ರೈಲ್ವೇ ಆಸ್ತಿ ಮತ್ತು ಪ್ರಯಾಣಿಕರ ರಕ್ಷಣೆ ಹಾಗೂ ಭದ್ರತೆಯನ್ನು ನಿರ್ವಹಿಸುತ್ತದೆ.

ಇದೀಗ ಈ ಪಡೆಯ ಒಂದಷ್ಟು ಸಿಬ್ಬಂದಿಗಳು ಬಿ.ಸಿ .ರೋಡು ಪರಿಸರದಲ್ಲಿ ತನಿಖಾ ಕಾರ್ಯದಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ.

- Advertisement -

Latest News

error: Content is protected !!