Friday, June 5, 2026
Homeತಾಜಾ ಸುದ್ದಿಬಿಗ್ ಬ್ರೇಕಿಂಗ್: ವಿಶಾಖಪಟ್ಟಣಂ ವಿಷಾನಿಲ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಬಿಗ್ ಬ್ರೇಕಿಂಗ್: ವಿಶಾಖಪಟ್ಟಣಂ ವಿಷಾನಿಲ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ

- Advertisement -
- Advertisement -

ವಿಶಾಖ ಪಟ್ಟಣ : ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಇದೀಗ ಏರಿಕೆಯಾಗಿದೆ. ಈಗಾಗಲೇ 10 ಜನರು ವಿಷಾನಿಲ ಸೇವಿಸಿದ್ದರಿಂದ ಸಾವನ್ನಪ್ಪಿದ್ದರು. ಇದೀಗ ಮತ್ತೆ ಮೂವರು ಕೆಜಿಹೆಚ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ವಿಷಾನಿಲ ಸೋರಿಕೆಯಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಭಾರಿ ವಿಷಾನಿಲ ದುರಂತವೊಂದು ಸಂಭವಿಸಿದೆ. ಇಂದು ಮುಂಜಾನೇ ವಿಷಾನಿಲ ಸೋರಿಕೆಯಾದ ಪರಿಣಾಮ, ವಿಷಾನಿಲ ಸೇವಿಸಿದಂತ 20ಕ್ಕೂ ಹೆಚ್ಚು ಜನರ ಆರೋಗ್ಯ ಗಂಭೀರವಾಗಿದೆ. 80 ಜನರನ್ನು ವೆಂಟಿಲೇಟರ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 300ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅಲ್ಲದೇ 10ಜನರ ಜೊತೆಗೆ ಮತ್ತೆ ಮೂವರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಇದೀಗ ಸ್ಥಳಕ್ಕೆ ಆಗಮಿಸಿರುವ ಭಾರತೀಯ ವಾಯಸೇನೆಯ 50ಕ್ಕೂ ಹೆಚ್ಚು ಸಿಬ್ಬಂದಿಗಳು, ಏರ್ ಕಂಪ್ರೆಸರ್ 2 ನಾವೆಲ್ ಆಂಬುಲೆನ್ಸ್ ಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರವಾಗಿವೆ. ಸೇನೆ ಸೇರಿದಂತೆ ತುರ್ತು ರಕ್ಷಣಾಧಿಕಾರಿಗಳ ತಂಡವೇ ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

- Advertisement -

Latest News

error: Content is protected !!