Saturday, June 6, 2026
Homeಕರಾವಳಿಉಡುಪಿಉಡುಪಿ; 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯನ್ನು ಬಾವಿಗಿಳಿದು ರಕ್ಷಿಸಿದ ಶ್ರೀವಿಶ್ವಪ್ರಸನ್ನ ತೀರ್ಥ...

ಉಡುಪಿ; 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯನ್ನು ಬಾವಿಗಿಳಿದು ರಕ್ಷಿಸಿದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

- Advertisement -
- Advertisement -

ಉಡುಪಿ: ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯನ್ನು ಬಾವಿಗೆ ಇಳಿದು ರಕ್ಷಿಸಿದ ಘಟನೆ ರವಿವಾರ ಮುಚ್ಚಲಕೋಡು ಎಂಬಲ್ಲಿ ನಡೆದಿದೆ.

ಮುಚ್ಚಲಕೋಡು ದೇವಸ್ಥಾನಕ್ಕೆ ಆಗಮಿಸಿದ್ದ ಸ್ವಾಮೀಜಿಗೆ ಅಲ್ಲಿನ ಸಿಬ್ಬಂದಿ, ದೇವಸ್ಥಾನದ ಬಾವಿಗೆ ಬೆಕ್ಕಿನ ಮರಿ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ.

ಕೂಡಲೇ ಸ್ವಾಮೀಜಿ ಬಾವಿಗೆ ಬಕೆಟ್ ಇಳಿಸಿ ಬೆಕ್ಕನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಿದ್ದಾಗ ಸ್ವತಃ ಸ್ವಾಮೀಜಿಯೇ ಸುಮಾರು ಐದಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದ್ದಾರೆ. ಈ ವೇಳೆ ಹೆದರಿದ ಬೆಕ್ಕಿನ ಮರಿ, ಸ್ವಾಮೀಜಿ ಇಳಿಸಿದ ಬಕೆಟ್‌ಗೆ ಹತ್ತಲಿಲ್ಲ. ಕೊನೆಗೆ ಸ್ವಾಮೀಜಿಯೇ ತನ್ನ ಕೈಯಲ್ಲಿ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ಮೇಲಕ್ಕೆ ತಂದು ರಕ್ಷಿಸಿದ್ದಾರೆ. ಸ್ವಾಮೀಜಿ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

- Advertisement -

Latest News

error: Content is protected !!