Wednesday, June 3, 2026
Homeಅಪರಾಧವಿಶಾಲಾ ಗಾಣಿಗ ಕೊಲೆ ಪ್ರಕರಣ: ಆರೋಪಿ ಪತಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

ವಿಶಾಲಾ ಗಾಣಿಗ ಕೊಲೆ ಪ್ರಕರಣ: ಆರೋಪಿ ಪತಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

- Advertisement -
- Advertisement -

ಉಡುಪಿ: ಬ್ರಹ್ಮಾವರದ ವಿಶಾಲಾ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ರಾಮಕೃಷ್ಣ ಗಾಣಿಗಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.‌

ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಇಂದು ಪೊಲೀಸರು ಹಾಜರು ಪಡಿಸಿದಾಗ ಹೆಚ್ಚಿನ ತನಿಖೆಗಾಗಿ ಆರೋಪಿ ರಾಮಕೃಷ್ಣನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಾಡಿಗೆ ಹಂತಕರ ಮೂಲಕ ಕೊಲೆಗೆ ಸುಪಾರಿ ನೀಡಿದ್ದ ಆರೋಪ ವಿಶಾಲಾ ಪತಿ ರಾಮಕೃಷ್ಣ ಮೇಲಿದೆ. ಉತ್ತರ ಪ್ರದೇಶದಿಂದ ಓರ್ವ ಆರೋಪಿಯನ್ನು ಕರೆತರುವುದು ಬಾಕಿ ಇದ್ದು ಇನ್ನೋರ್ವ ಹಂತಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಜುಲೈ 23ರಂದು ಆರೋಪಿ ರಾಮಕೃಷ್ಣನನ್ನು ಮತ್ತೆ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ‌.

- Advertisement -

Latest News

error: Content is protected !!