Wednesday, June 26, 2024
Homeಕ್ರೀಡೆಈ ಸಲ ಕಪ್ ನಮ್ದೇ ಅನ್ನೋ ಸೂಚನೆ ಕೊಟ್ಟ ಆರ್ ಸಿ ಬಿ; ಮೊದಲ ಪಂದ್ಯದಲ್ಲೇ...

ಈ ಸಲ ಕಪ್ ನಮ್ದೇ ಅನ್ನೋ ಸೂಚನೆ ಕೊಟ್ಟ ಆರ್ ಸಿ ಬಿ; ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್ ಕೊಹ್ಲಿ

spot_img
- Advertisement -
- Advertisement -

ಬೆಂಗಳೂರು; ಮೊದಲೇ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ 8 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಅಲ್ಲದೇ ಈ ಮೂಕ ಈ ಬಾರಿ ಕಪ್ ನಮ್ಮದೇ ಅನ್ನೋ ಸೂಚನೆ ನೀಡಿದೆ.

ಡಬಲ್ ಹೆಡರ್ ದಿನವಾದ ಇಂದು ನಡೆದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬರೋಬ್ಬರಿ 8 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.ತಂಡದ ಪರ 148 ರನ್​ಗಳ ಶತಕದ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಆರ್​ಸಿಬಿಯ ದಾಖಲೆಯ ಗೆಲುವಿನ ಹೀರೋಗಳಾದರು.

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. 49 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸಿ ದಾಖಲೆಯ ಪುಟ ಸೇರಿದ್ದಾರೆ.

- Advertisement -
spot_img

Latest News

error: Content is protected !!