Wednesday, June 3, 2026
Homeಕ್ರೀಡೆರಾಜ್ಯದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ; ನಿನ್ನೆ ಒಂದೇ ದಿನ 284 ಮಂದಿಗೆ ಕೋವಿಡ್...

ರಾಜ್ಯದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ; ನಿನ್ನೆ ಒಂದೇ ದಿನ 284 ಮಂದಿಗೆ ಕೋವಿಡ್ ಪಾಸಿಟಿವ್

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಹೊಸದಾಗಿ 284 ಮಂದಿಗೆ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ನಿನ್ನೆ ಒಂದೇ ದಿನ 9,043 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬಳ್ಳಾರಿ-20, ಬೆಂಗಳೂರು ಗ್ರಾಮಾತರ 05, ಬೆಂಗಳೂರು ನಗರ 170, ಚಾಮರಾಜನಗರ, ಗದಗ ಹಾಗೂ ಮಂಡ್ಯದಲ್ಲಿ ತಲಾ ಒಬ್ಬರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಹೇಳಿದೆ.

ಚಿತ್ರದುರ್ಗ, ರಾಯಚೂರು ಮತ್ತು ತುಮಕೂರಿನಲ್ಲಿ ತಲಾ ಇಬ್ಬರಿಗೆ, ದಕ್ಷಇಣ ಕನ್ನಡ, ಕೊಪ್ಪಳ ಮತ್ತು ವಿಜಯಪುರದಲ್ಲಿ ತಲಾ ಮೂವರಿಗೆ, ದಾವಣಗೆರೆ 05, ಧಾರವಾಡ 08, ಹಾಸನ, ಹಾವೇರಿ ಮತ್ತು ಕೋಲಾರ 04, ಕಲಬುರ್ಗಿ 07, ಶಿವಮೊಗ್ಗ 34 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 05 ಸೇರಿದಂತೆ 284 ಮಂದಿಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 40,77,920ಕ್ಕೆ ಏರಿಕೆಯಾಗಿದೆ. ಇವರಲ್ಲಿ 132 ಸೇರಿದಂತೆ 40,36,185 ಮಂದಿ ಗುಣಮುಖರಾಗಿದ್ದಾರೆ. ಈಗ 1,410 ಮಂದಿ ಸಕ್ರೀಯ ಸೋಂಕಿತರು ಇದ್ದಾರೆ. ಓರ್ವ ಸೋಂಕಿತ ಸೇರಿದಂತೆ ಈವರೆಗೆ 40,283 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.

- Advertisement -

Latest News

error: Content is protected !!