- Advertisement -
![]()
- Advertisement -
ಕಾರ್ಕಳ: ಮಾಳ ಹುಕ್ರಟ್ಟೆ ರಸ್ತೆಯಲ್ಲಿ ಶನಿವಾರ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾಗಿ ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.
ಗೋಕಳವು ಜಾಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಅತೀ ವೇಗವಾಗಿ ಬಂದ ಕಾರು ಬ್ಯಾರಿಕೇಡ್ ಮೇಲೆ ಮುನ್ನುಗಿಸಿ ಮಾಳ ಕಡೆಗೆ ಚಲಾಯಿಸಿ ಹೋಗಿತ್ತು. ಕೂಡಲೇ ಪೊಲೀಸರು ಕಾರನ್ನು ಹಿಂಬಾಲಿಸಿ ಇಬ್ಬರು ಆರೋಪಿ ಬಂಧಿಸಿ ಕಾರನ್ನು ವಶಕ್ಕೆ ತೆಗೆದಿದ್ದಾರೆ.
- Advertisement -


