Saturday, June 6, 2026
Homeಕರಾವಳಿಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀಗಳಿಗೆ ಭಕ್ತಿಪೂರ್ವಕ ವಿನಯಾಂಜಲಿ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀಗಳಿಗೆ ಭಕ್ತಿಪೂರ್ವಕ ವಿನಯಾಂಜಲಿ ಕಾರ್ಯಕ್ರಮ

- Advertisement -
- Advertisement -

ಅತಿಶಯ ಕ್ಷೇತ್ರ ಶ್ರವಣಬೆಳಗೊಳ ಮಠಾಧೀಶರೂ, ಜೈನ ಸಮಾಜದ ಮಾರ್ಗದರ್ಶಕರೂ ಆದ ‘ಕರ್ಮಯೋಗಿ’ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಯವರು ದಿನಾಂಕ 23-3-2023ರಂದು ಮರಣ ಹೊಂದಿರುತ್ತಾರೆ.

ಈ ಪ್ರಯುಕ್ತ ಇಂದು ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಪೂಜ್ಯ ಶ್ರೀಗಳಿಗೆ ಗೌರವ ನಮನ ಸಲ್ಲಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ವೀರ್ ಡಾ ನವೀನ್ ಕುಮಾರ್ ಜೈನ್ ವಹಿಸಿಕೊಂಡಿದ್ದರು.

ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಯವರ ಪರಿಚಯದ ಜೊತೆ ತಮ್ಮ ಅನುಭವಗಳನ್ನು ವಲಯ ನಿರ್ದೇಶಕರಾದ ವೀರ್ ಬಿ ಸೋಮಶೇಖರ್ ಶೆಟ್ಟಿ ಮತ್ತು ಅನನ್ಯ ಜೈನ್ ಇವರು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಿಲನ್ ನ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು. ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರೆ ಅಧ್ಯಕ್ಷರು ಸರ್ವರನ್ನು ಸ್ವಾಗತಿಸಿದರು.

- Advertisement -

Latest News

error: Content is protected !!