Wednesday, June 3, 2026
Homeತಾಜಾ ಸುದ್ದಿವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ, ಕಿಚ್ಚ ಸುದೀಪ್ ಪರಮಾಪ್ತ ಜ್ಯಾಕ್ ಮಂಜು ಆಸ್ಪತ್ರೆಗೆ ದಾಖಲು

ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ, ಕಿಚ್ಚ ಸುದೀಪ್ ಪರಮಾಪ್ತ ಜ್ಯಾಕ್ ಮಂಜು ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ, ಕಿಚ್ಚ ಸುದೀಪ್ ಅವರ ಪರಮಾಪ್ತ ಜಾಕ್ ಮಂಜು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದ ಮಂಜು ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಜು ಅವರ ಆರೋಗ್ಯ ಚೇತರಿಕೆಗಾಗಿ ಕಿಚ್ಚನ ಅಸಂಖ್ಯಾತ ಅಭಿಮಾನಿಗಳು ಹಾರೈಸಿದ್ದು, ಮಂಜು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಅವರು ಸಾಕಷ್ಟು ಓಡಾಟ ನಡೆಸಿದ್ದರು. ಈ ಒತ್ತಡದಿಂದಾಗಿ ಇಂತಹ ಸಮಸ್ಯೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸುದೀಪ್ ಮತ್ತು ಜಾಕ್ ಮಂಜು ಕಾಂಬಿನೇಷನ್ ನ ಬಹುಕೋಟಿ ಬಜೆಟ್ ಸಿನಿಮಾವಿದು. ಈ ಹಿಂದೆಯೂ ಕಿಚ್ಚನಿಗಾಗಿ ಮಂಜು ಅವರು ಸಿನಿಮಾ ಮಾಡಿದ್ದಾರೆ. ಆದರೆ, ಈ ಸಿನಿಮಾ ಹಲವು ಭಾಷೆಗಳಲ್ಲಿ ರೆಡಿಯಾಗಿ ಬಿಡುಗಡೆ ಆಗುತ್ತಿದೆ. ಅಲ್ಲದೇ, 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಮಂಜು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಆಪ್ತರು ಹೇಳಿದ್ದಾರೆ.

- Advertisement -

Latest News

error: Content is protected !!