Wednesday, June 3, 2026
Homeಕರಾವಳಿಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವು !

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವು !

- Advertisement -
- Advertisement -

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಬುಧವಾರ ಮೃತಪಟ್ಟಿದ್ದರು.

ಕುಮಾಪಾಲ ಆಶ್ರಯ ಕಾಲೋನಿ ನಿವಾಸಿ ವಿಜೇಶ್ (31) ಅಲಿಯಾಸ್ ವಿಜಿ ಎಂಬಾತನೇ ಮೃತ ವ್ಯಕ್ತಿ.

ಡಿ.2ರಂದು ನಡೆದ ಅಪಘಾತದಲ್ಲಿ ಕೊಲ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಬೈಕ್ ನಲ್ಲಿ ಬಂದಿದ್ದ ವಿಜೇಶ್ ಡಿಕ್ಕಿ ಹೊಡೆದಿದ್ದ.

ದ್ವಾರಕಾ ಕೊಲ್ಯ ನಿವಾಸಿ ವಿಜೇಶ್ ಹಾಗೂ ಪಾದಚಾರಿ ಪಲ್ಲವಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ವಿಜೇಶ್ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಪಲ್ಲವಿ ಅವರ ಸ್ಥಿತಿಯೂ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

- Advertisement -

Latest News

error: Content is protected !!