Thursday, June 4, 2026
Homeತಾಜಾ ಸುದ್ದಿವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರ ರೋಸ್ ವುಡ್ ಮೂಲಕ ನವೀಕರಣ

ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರ ರೋಸ್ ವುಡ್ ಮೂಲಕ ನವೀಕರಣ

- Advertisement -
- Advertisement -

ಬೆಂಗಳೂರು: ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರವನ್ನು ನವೀಕರಣ ಮಾಡಲಾಗುತ್ತಿದೆ. ಈ ಹಿಂದಿನ ಕಬ್ಬಿಣದ ಗೇಟ್ ಬದಲಾಗಿ ಈಗ ರೋಸ್ ವುಡ್ ಮೂಲಕ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ.

ಕೆತ್ತನೆಯ ಚಿತ್ರವಿರುವ ರೋಸ್ ವುಡ್ ಬಳಸಿ ಪಶ್ಚಿಮ ಪ್ರವೇಶ ದ್ವಾರವನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ ಮೇರೆಗೆ ನವೀಕರಣಗೊಳಿಸಲಾಗುತ್ತಿದೆ.

ಎಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ನವೀಕರಣ ಕಾರ್ಯ ನಡೆಯುತ್ತಿದೆ.

ಈಗಾಗಲೇ ವಿಧಾನಸಭೆಯ ಮೊಗಸಾಲೆ ಪ್ರವೇಶಿಸುವ ದ್ವಾರವನ್ನು ರೋಸ್ ವುಡ್ ಮೂಲಕ ಮರು ನಿರ್ಮಾಣ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ವಿಧಾನಸೌಧದ ಪೂರ್ವ, ಉತ್ತರ ಹಾಗೂ ದಕ್ಷಿಣ ಭಾಗದ ದ್ವಾರಗಳನ್ನೂ ರೋಸ್ ವುಡ್ ನಿಂದಲೇ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ

- Advertisement -

Latest News

error: Content is protected !!