Monday, June 30, 2025
Homeತಾಜಾ ಸುದ್ದಿವೇದಿಕೆಯಲ್ಲೇ ಮೈಮರೆತ ಬಿಜೆಪಿ ಮುಖಂಡ, ಮಹಿಳೆಯೊಂದಿಗೆ ತಬ್ಬಿಕೊಂಡು ಅನುಚಿತವಾಗಿ ಅಶ್ಲೀಲ ನೃತ್ಯ

ವೇದಿಕೆಯಲ್ಲೇ ಮೈಮರೆತ ಬಿಜೆಪಿ ಮುಖಂಡ, ಮಹಿಳೆಯೊಂದಿಗೆ ತಬ್ಬಿಕೊಂಡು ಅನುಚಿತವಾಗಿ ಅಶ್ಲೀಲ ನೃತ್ಯ

spot_img
- Advertisement -
- Advertisement -

ಜೈಪುರ್: ರಾಜಸ್ಥಾನದ ಪ್ರತಾಪ್ ಗಢ ಜಿಲ್ಲೆಯ ಮ್ಯಾಂಗ್ರೋಲ್ ಬಿಜೆಪಿ ಮುಖಂಡ ಕೈಲಾಶ್ ಗುರ್ಜರ್ ಮಹಿಳಾ ಡ್ಯಾನ್ಸರ್ ಜೊತೆಗೆ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸಿ ತಬ್ಬಿಕೊಂಡು ಅನುಚಿತವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಗ್ರಾಮೀಣ ಮಂಡಳಿಯ ಅಧ್ಯಕ್ಷ ಕೈಲಾಶ್ ಅವರು ಮಹಿಳಾ ನರ್ತಕಿಯೊಂದಿಗೆ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಕೈಲಾಶ್, ಇದು ಕುಟುಂಬ ಆಯೋಜಿಸಿದ್ದ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮ. ಕುಟುಂಬದವರೊಂದಿಗೆ ನೃತ್ಯ ಮಾಡಿದ್ದೇನೆ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿದ್ದಾರೆ. ನನ್ನ ಇಮೇಜ್ ಗೆ ಕಳಂಕ ತರುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂರ್ಣಿಯಾ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದ್ದು, ನಿಜವೆಂದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!