Friday, June 5, 2026
Homeತಾಜಾ ಸುದ್ದಿಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ದೈವಾರಾಧನೆಗೆ ಅಪಮಾನ ಆರೋಪ;;ದೈವಾರಾಧನೆ ಸಂರಕ್ಷಣಾ ವೇದಿಕೆಯ ಹೋರಾಟಕ್ಕೆ ವಿಹಿಂಪ ಮತ್ತು ಭಜರಂಗದಳ...

ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ದೈವಾರಾಧನೆಗೆ ಅಪಮಾನ ಆರೋಪ;;ದೈವಾರಾಧನೆ ಸಂರಕ್ಷಣಾ ವೇದಿಕೆಯ ಹೋರಾಟಕ್ಕೆ ವಿಹಿಂಪ ಮತ್ತು ಭಜರಂಗದಳ ಬೆಂಬಲ

- Advertisement -
- Advertisement -

ಮಂಗಳೂರು: ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ದೈವಾರಾಧನೆಗೆ ಅಪಮಾನವಾಗದಂತೆ ಕ್ರಮ ಕೈಗೊಳ್ಳಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ದೈವಾರಾಧನಾ ವೇದಿಕೆಯ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬೆಂಬಲ‌ ನೀಡಿವೆ.

ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ‌ ಶರಣ್ ಪಂಪ್ ವೆಲ್, ಇನ್ನು ಮುಂದೆ ಸಿನಿಮಾ, ಧಾರಾವಾಹಿ ಮತ್ತು ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ದೈವಾರಾಧನೆಗೆ ಆದರದ್ದೇ ಆಗಿರುವ ಮಹತ್ವವಿದ್ದು, ಚಲನಚಿತ್ರ, ಧಾರವಾಹಿ ಮತ್ತು ನಾಟಕಗಳಲ್ಲಿ ನಮ್ಮ ನಂಬಿಕೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬೆಂಬಲ ನೀಡುತ್ತದೆ ಎಂದು ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

- Advertisement -

Latest News

error: Content is protected !!