Wednesday, June 3, 2026
Homeಕರಾವಳಿಹಿರಿಯ ಕೊಂಕಣಿ ಸಾಹಿತಿ ಗ್ಲಾಡಿಸ್ ರೇಗೋ ನಿಧನ

ಹಿರಿಯ ಕೊಂಕಣಿ ಸಾಹಿತಿ ಗ್ಲಾಡಿಸ್ ರೇಗೋ ನಿಧನ

- Advertisement -
- Advertisement -

ಮಂಗಳೂರು: ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಕೊಡುಗೆ ನೀಡಿರುವ ಬರಹಗಾರ್ತಿ ಗ್ಲಾಡಿಸ್ ರೇಗೋ ಅವರು ಜುಲೈ 21ರಂದು ನಿಧನರಾಗಿದ್ದಾರೆ.

ಗ್ಲಾಡಿಸ್ ರೇಗೋ ಎಂದೇ ಜನಪ್ರಿಯರಾಗಿದ್ದ ಸಿಂಪ್ರೋಜಾ ಫಿಲೋಮಿನಾ ಗ್ಲಾಡಿಸ್ ಸಿಕ್ವೇರಾ ಅವರು 1945 ರಲ್ಲಿ ಮಂಗಳೂರಿನ ಬೆಂದೂರಿನಲ್ಲಿ ಜನಿಸಿದರು. ಕೊಂಕಣಿಯಲ್ಲಿ ನಾಲ್ಕು ಸಣ್ಣ ಕಥಾ ಸಂಕಲನಗಳು, ಜಾನಪದದ ಬಗ್ಗೆ ಆರು ಕೃತಿಗಳು, ಮತ್ತು ಎರಡು ಕಥಾ ಸಂಕಲನಗಳು ಸೇರಿವೆ. ಒಟ್ಟಾರೆಯಾಗಿ ಅವರು ಸಣ್ಣ ಕಥೆಗಳು, ಜಾನಪದ ಸಾಹಿತ್ಯ, ಜೀವನಚರಿತ್ರೆ, ಮತ್ತು ಸಂಶೋಧನೆ ಒಳಗೊಂಡಂತೆ 27 ಪುಸ್ತಕಗಳನ್ನು ಬರೆದಿದ್ದಾರೆ.

ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಅವರಿಗೆ ದಾಯ್ಜಿ ದುಬೈ ಹಾಗೂ ಸಂದೇಶ ಪ್ರಶಸ್ತಿ ಲಭಿಸಿವೆ.

- Advertisement -

Latest News

error: Content is protected !!