Sunday, June 7, 2026
Homeತಾಜಾ ಸುದ್ದಿಹೌದು ನನ್ನ ಮಗನಿಗೆ ಮದುವೆ ಆಗಿರೋದು ನಿಜ ಎಂದ ಹಿರಿಯ ನಟಿ ಲೀಲಾವತಿ

ಹೌದು ನನ್ನ ಮಗನಿಗೆ ಮದುವೆ ಆಗಿರೋದು ನಿಜ ಎಂದ ಹಿರಿಯ ನಟಿ ಲೀಲಾವತಿ

- Advertisement -
- Advertisement -

ಬೆಂಗಳೂರು; ಕಳೆದ ಕೆಲವು ದಿನಗಳಿಂದ ವಿನೋದ್ ರಾಜ್ ತಮ್ಮ ಮಗ ಹಾಗೂ ಪತ್ನಿಯೊಂದಿಗೆ ಇರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ವಿನೋದ್ ರಾಜ್ ಜೊತೆಗೆ ತಾಯಿ ಲೀಲಾವತಿ, ಮಗ ಮತ್ತು ಪತ್ನಿ ಜೊತೆಗಿದ್ದಾರೆ. ಇದೀಗ ಈ ಬಗ್ಗೆ ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರೇ ಮಾತನಾಡಿದ್ದಾರೆ.

ಲೀಲಾವತಿ ಮಗನಿಗೆ ಮದುಗೆ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ನನ್ನ ಮಗನಿಗೆ ಮದುವೆ ಆಗಿದ್ದು ನಿಜ ಎಂದಿದ್ದಾರೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಸರಳವಾಗಿ ಮದುವೆ ಮಾಡಿದೆ. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ. ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಸರಳವಾಗಿ ಮದುವೆ ಮಾಡಿ ಮುಗಿಸಿದೆ, ತಿರುಪತಿ ಬೆಟ್ಟದ ಮೇಲೆ ಸಿಂಪಲ್ ಆಗಿ ಮದುವೆ ಮಾಡಿಸಿದ್ದೇನೆ. ಬರೀ ಏಳು ಜನ ಕನ್ನಡಿಗರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಲೀಲಾವತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಟ ವಿನೋದ್ ರಾಜ್ ಅವರು ಮದುವೆ ಆಗಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಆದರೆ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ಅವರ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಕುಟುಂಬದ ಕಡೆಯಿಂದಲೇ ಈ ಬಗ್ಗೆ ಕ್ಲಾರಿಟಿ ಸಿಕ್ಕಿದೆ.

- Advertisement -

Latest News

error: Content is protected !!