Thursday, June 4, 2026
Homeಕರಾವಳಿವೇಣೂರು: ನಿವೃತ ಪೊಲೀಸ್ ಅಧಿಕಾರಿ ಹಾಜಿ ಕೆ.ಎಂ. ಯೂಸುಫ್ ನಿಧನ

ವೇಣೂರು: ನಿವೃತ ಪೊಲೀಸ್ ಅಧಿಕಾರಿ ಹಾಜಿ ಕೆ.ಎಂ. ಯೂಸುಫ್ ನಿಧನ

- Advertisement -
- Advertisement -

ವೇಣೂರು: ವಯೋಸಹಜ ಅನಾರೋಗ್ಯದಿಂದ ಚಿಕಿತ್ಸೆಗೆ ಒಳಗಾಗಿದ್ದ ಕುಂಡದಬೆಟ್ಟಿನ ನಿವಾಸಿ ನಿವೃತ ಪಿಎಸ್‌ಐ, ಹಾಜಿ ಕೆ.ಎಂ. ಯೂಸುಫ್ (80) ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.‌

ಇವರು ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪಿಎಸ್‌ಐ ಆಗಿ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೆ ಕುಂಡದಬೆಟ್ಟು ಜುಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದು, ಇದೀಗ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ದ.ಕ‌. ಜಿಲ್ಲಾ ವಕ್ಫ್ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ ಸಜ್ಜನಿಕೆಯವರಾದ ಯೂಸುಫ್ ಅವರು ಪತ್ನಿ, ಇಬ್ಬರು ಪುತ್ರರು, ಮೂರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ.

- Advertisement -

Latest News

error: Content is protected !!