Sunday, May 12, 2024
HomeUncategorizedಮಂಗಳೂರು: 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾಹನ ಕಳ್ಳನ ಬಂಧನ

ಮಂಗಳೂರು: 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾಹನ ಕಳ್ಳನ ಬಂಧನ

spot_img
- Advertisement -
- Advertisement -

ಮಂಗಳೂರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ‌ ಪ್ರಕರಣ ಆರೋಪಿಯನ್ನು‌ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಅಸ್ಲಾಂ ಪಾಶ (36) ಬಂಧಿತ ಆರೋಪಿ.‌ಈತನಿಗೆ ಮೈಸೂರಿನ ಪಿರಿಯಾಪಟ್ಟಣ ಹರೇನಹಳ್ಳಿಯಿಂದ ಪೊಲೀಸರು ಬಂಧಿಸಿದ್ದಾರೆ‌. ಆರೋಪಿಯ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರ ಅ ಕ್ರ no 300/1997 ರಲ್ಲಿ ಪ್ರಕರಣ ದ 379.411 ಐಪಿಸಿ 3 ಕಾರು ಕಳವು ಪ್ರಕರಣ ದಾಖಲಾಗಿದ್ದು ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಕಾರಣ ಪ್ರಕರಣವನ್ನ 2015 ರಲ್ಲಿ LPC ಮಾಡಲಾಗಿತ್ತು. ಆರೋಪಿಯು ಪೊಲೀಸರ ಕೈಗೆ ಸಿಗದೇ ಸುಮಾರು 20 ವರ್ಷ ತಲೆಮರಿಸಿಕೊಂಡಿದ್ದು ಆತನ ಮೇಲೆ ನ್ಯಾಯಾಲಯವು ದಸ್ತಗಿರಿ LPC ವಾರೆಂಟ್ ಹೊರಡಿಸಿತ್ತು.

ಆರೋಪಿಯುನ್ನು ನಿನ್ನೆ ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಂತೆ ಪತ್ತೆಮಾಡಿ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್ ಹಾಗೂ pc ರವಿಕುಮಾರ್ ಎಂಬವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿಯ ಮೇಲೆ ಹುಣಸೂರು, ಪಿರಿಯಾಪಟ್ಟಣ,ಬೆಟ್ಟದಪುರ,ಉದಯಪುರ,ಭದ್ರಾವತಿ ಠಾಣೆ,ಮಂಡ್ಯ,ಮೈಸೂರು ನಗರ,ಬೆಂಗಳೂರು ನಗರ ಹೀಗೆ ಹಲವಾರು ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿರುತ್ತವೆ‌‌.ಆರೋಪಿಯು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನ ಕಳವು ಮಾಡಿ ಅದರ ಚೇಸ್ ನಂಬರನ್ನು ಜಜ್ಜಿ ಕಾರಿನ ಬಣ್ಣ ಹಾಗೂ ನಂಬರ್ ಪ್ಲೇಟ್ ಅನ್ನು ಬದಲಾಯಿಸಿ ಕಡಿಮೆ ಬೆಲೆಗೆ ಬೆಂಗಳೂರಿಗೆ ಮಾರಾಟ ಮಾಡುವುದರಲ್ಲಿ ಚಾಲಾಕಿತನವನ್ನು ಹೊಂದಿರುವನಾಗಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!