Saturday, June 27, 2026
Homeಮನರಂಜನೆವಾಸುಕಿ ವೈಭವ್ ಡೇಟಿಂಗ್ ಗೆ ಕರಿತಿದ್ದಾರೆ ಯಾರಾದ್ರೂ ರೆಡಿ ಇದ್ದೀರಾ?

ವಾಸುಕಿ ವೈಭವ್ ಡೇಟಿಂಗ್ ಗೆ ಕರಿತಿದ್ದಾರೆ ಯಾರಾದ್ರೂ ರೆಡಿ ಇದ್ದೀರಾ?

- Advertisement -
- Advertisement -

ಬೆಂಗಳೂರು :  ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ಯಾರನ್ನೂ ನೆಮ್ಮದಿಯಾಗಿರೋಕೆ ಬಿಟ್ಟಿಲ್ಲ. ಮನೆಯಿಂದ ಹೊರಗೆ ಹೋದ್ರೆ ಎಲ್ಲಿ ಕೊರೊನಾ ಅಂಟಿಕೊಳ್ಳುತ್ತೋ ಅನ್ನೋ ಭಯದಲ್ಲೇ ಇದ್ದಾರೆ ಜನ. ಅದರಲ್ಲೂ ಬಹುತೇಕ ಸೆಲೆಬ್ರೆಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಬೇರೆ ಬೇರೆ ಆಕ್ಟಿವಿಟೀಸ್ ಮೂಲಕ ಸಮಯ ದೂಡುತ್ತಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗದ ತಾರೆಯರೂ ಹೊರತಾಗಿಲ್ಲ.

 ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಅಂತೂ ಈ ಸಮಯವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಹೊಸ ಹಾಡುಗಳನ್ನು ಕಂಪೋಸ್ ಮಾಡುತ್ತಾ ಮನೆಯಲ್ಲೇ ಆರಾಮಾಗಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಫುಲ್ ಆ್ಯಕ್ಟೀವ್ ಈ ಚಾಕಲೇಟ್ ಬಾಯ್. ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಹುಡ್ಗಿ ಫೋಟೋ ಒಂದನ್ನು ಶೇರ್ ಮಾಡಿರುವ ವಾಸುಕಿ ಯಾರಾದ್ರೂ ಡೇಟಿಂಗ್ ಮಾಡೋಕೆ ರೆಡಿ ಇದ್ದೀರಾ ಅಂತಾ ಕೇಳಿದ್ದಾರೆ. ಅಂದ್ಹಾಗೆ ಆ ಹುಡ್ಗಿ ಬೇರೆ ಯಾರೂ ಅಲ್ಲ ಫೇಸ್ ಆ್ಯಪ್ ಮೂಲಕ ವಾಸುಕಿ ತಮ್ಮ ಫೋಟೋವನ್ನು ಹುಡ್ಗಿ ಫೋಟೋವಾಗಿ ಬದಲಾಯಿಸಿದ್ದಾರೆ. ಇದನ್ನ ನೋಡಿದ ಕೆಲವರು ನೀವು ಚಂದನಾ ಥರಾ ಕಾಣ್ತಿದ್ದೀರಾ ಅಂದ್ರೆ, ಇನ್ನೂ ಕೆಲವರು ಡೇಟಿಂಗ್ ಮಾಡೋಕೆ ನಾವು ರೆಡಿ ಅಂತಾ ಕಾಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!