- Advertisement -
![]()
- Advertisement -
ನವದೆಹಲಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಜ್ವಾಲಾಮುಖಿಯ ಬೂದಿ ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಆವರಿಸಿದೆ.
ಕೆಂಪು ಸಮುದ್ರವನ್ನು ದಾಟಿ ವಾಯುವ್ಯ ಭಾರತದ ಕಡೆಗೆ ಬಂದಿರುವ ಬೂದಿಯ ಮೋಡಗಳು ಪಶ್ಚಿಮ ರಾಜಸ್ಥಾನದ ಮೂಲಕ ಭಾರತ ಪ್ರವೇಶ ಮಾಡಿವೆ ಎಂದು ತಿಳಿದುಬಂದಿದೆ.
ಗಂಟೆಗೆ ಸುಮಾರು 130 ಕಿಲೋ ಮೀಟರ್ ವೇಗದಲ್ಲಿ ಬೂದಿಯ ಮೋಡಗಳ ಚಲನೆ ಇದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಮಾನಗಳಿಗೆ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ ವಾಯು ಗುಣಮಟ್ಟ ಹದಗೆಟ್ಟಿರುವ ಸಂದರ್ಭದಲ್ಲಿಯೇ ನವದೆಹಲಿಯಲ್ಲಿ ಬೂದಿ ಮೋಡಗಳ ಕಾಟ ಎದುರಾದಂತಾಗಿದೆ
- Advertisement -


