Wednesday, May 8, 2024
HomeWorld15-18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಲಸಿಕೆ ಆರಂಭ: ಪ್ರಧಾನಿ ನರೇಂದ್ರ ಮೋದಿ

15-18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಲಸಿಕೆ ಆರಂಭ: ಪ್ರಧಾನಿ ನರೇಂದ್ರ ಮೋದಿ

spot_img
- Advertisement -
- Advertisement -

ನವದೆಹಲಿ: 15-18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಲಸಿಕೆ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದ ಪ್ರಧಾನಿ, ಒಮಿಕ್ರಾನ್ ಬಗ್ಗೆ ಆಂತಕ ಪಡಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು ಹಾಗೂ ಎಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದು ಹೇಳಿದರು.

ಫ್ರಂಟ್‍ಲೈನ್ ವರ್ಕರ್ಸ್‍ಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ತಿಳಿಸಿದರು. ಕೊಮೊರ್ಬಿಡಿಟಿ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್‌ ಡೋಸ್‌ಗಳಿಗೆ ಅರ್ಹರಾಗಿರುತ್ತಾರೆ.

ದೇಶದಲ್ಲಿ 18 ಲಕ್ಷ ಐಸೋಲೇಷನ್ ಬೆಡ್​​ಗಳಿವೆ ಜೊತೆಗೆ 5 ಲಕ್ಷ ಆಕ್ಸಿಜನ್ ಸಪೋರ್ಟ್​​​ ಬೆಡ್​ ಸಿದ್ಧಗೊಂಡಿವೆ ಎಂದಿರುವ ಅವರು, ದೇಶದಲ್ಲಿ ಶೇ. 90ರಷ್ಟು ಜನರಿಗೆ ಮೊದಲ ವ್ಯಾಕ್ಸಿನ್​​ ಡೋಸ್ ನೀಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.

ಡಿಎನ್ ಎ ಆಧರಿತ ಲಸಿಕೆ ಹಾಗೂ ಮೂಗಿನ ಮೂಲಕ ನೀಡುವ ವ್ಯಾಕ್ಸಿನ್ ಸಿದ್ಧವಾಗಿದೆ ಅದನ್ನು ಶೀಘ್ರದಲ್ಲಿ ನೀಡುತ್ತೇವೆ ಎಂದರು.

- Advertisement -
spot_img

Latest News

error: Content is protected !!