Thursday, June 25, 2026
Homeಕರಾವಳಿಕಾಸರಗೋಡು: ಸುಳ್ಳು, ಊಹಾಪೋಹಗಳನ್ನು ಹರಡುತ್ತಿರುವ ಸಾಮಾಜಿಕ ಜಾಲತಾಣಗಳ ಅಡ್ಮಿನ್‌ಗಳ ಮೇಲೆ ತೀವ್ರ ನಿಗಾ !

ಕಾಸರಗೋಡು: ಸುಳ್ಳು, ಊಹಾಪೋಹಗಳನ್ನು ಹರಡುತ್ತಿರುವ ಸಾಮಾಜಿಕ ಜಾಲತಾಣಗಳ ಅಡ್ಮಿನ್‌ಗಳ ಮೇಲೆ ತೀವ್ರ ನಿಗಾ !

- Advertisement -
- Advertisement -

ಕಾಸರಗೋಡು: ಕೆಲವೊಂದು ರಾಜಕೀಯ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಸುಳ್ಳು ಮತ್ತು ಊಹಾಪೋಹಗಳನ್ನು ಹರಡುತ್ತಿರುವ ಸಾಮಾಜಿಕ ಜಾಲತಾಣಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಿ ಎಂದು ಕೇರಳ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಅವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ನಡೆದ ಬಿಜೆಪಿ ಮತ್ತು ಎಸ್‌ಡಿಪಿಐ ಮುಖಂಡರ ಹತ್ಯೆಯ ನಂತರ ಕೋಮು ದ್ವೇಷ ಹರಡುವ ಸಂದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದನ್ನು ಗಮನಿಸಿ ಈ ಸೂಚನೆ ನೀಡಲಾಗಿದೆ.

- Advertisement -

Latest News

error: Content is protected !!