Sunday, May 19, 2024
Homeಕರಾವಳಿಮಂಗಳೂರುಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಂತಾಪ

ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಂತಾಪ

spot_img
- Advertisement -
- Advertisement -

ಬೆಳ್ತಂಗಡಿ; ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

 ಶ್ರೀ ವಸಂತ ಬಂಗೇರರವರು ಸ್ವರ್ಗಸ್ಥರಾದ ವಿಚಾರ ತಿಳಿದು ವಿಷಾದವಾಯಿತು. ಅವರು ನಮ್ಮ ತಾಲ್ಲೂಕಿನ ಶಾಸಕರಾಗಿ ಜನಸ್ನೇಹಿಯಾಗಿದ್ದರು. ಸಾಮಾನ್ಯ ಜನರೊಳಗೆ ಹಾಗೂ ಕುಟುಂಬದಲ್ಲಿ ವಿಚಾರ-ಬೇಧಗಳು ಬಂದಾಗ ನಮ್ಮ ತುಳುನಾಡಿನಲ್ಲಿ ಹೇಳುವಂತೆ ಪಂಚಾತಿಕೆ ಅಂದರೆ ಒಗ್ಗೂಡಿಸುವಿಕೆಗೆ ಪ್ರಯತ್ನ ಮಾಡುತ್ತಿದ್ದರು. ಅವರ ಈ ಹವ್ಯಾಸದಿಂದ ಅವರಿಗೆ ಎಷ್ಟೇ ಕಷ್ಟವಾದರೂ ಸಮಾಜದ ಅನೇಕ ಕುಟುಂಬಗಳನ್ನು ಒಗ್ಗೂಡಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದರು. ಅವರ ಈ ಸಾಧನೆಯಿಂದಾಗಿ ಸಮಾಜದಲ್ಲಿರುವ ಬಿರುಕು ಬಿಟ್ಟ ಅನೇಕ ಕುಟುಂಬಗಳು ಒಟ್ಟಾಗುತ್ತಿದ್ದವು.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದಿದ್ದಾರೆ.

- Advertisement -
spot_img

Latest News

error: Content is protected !!