Friday, May 17, 2024
Homeತಾಜಾ ಸುದ್ದಿಉತ್ತರಾಖಂಡ ನಂದಾದೇವಿ ನೀರ್ಗಲ್ಲು ಸ್ಫೋಟ-2009 ರಲ್ಲಿಯೇ ಹೊರಬಿದ್ದಿತ್ತು ದುರ್ಘಟನೆಗಳ ಭವಿಷ್ಯ!..

ಉತ್ತರಾಖಂಡ ನಂದಾದೇವಿ ನೀರ್ಗಲ್ಲು ಸ್ಫೋಟ-2009 ರಲ್ಲಿಯೇ ಹೊರಬಿದ್ದಿತ್ತು ದುರ್ಘಟನೆಗಳ ಭವಿಷ್ಯ!..

spot_img
- Advertisement -
- Advertisement -

ಹೊಸದಿಲ್ಲಿ: ನಿನ್ನೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದೆ. ಪರಿಣಾಮ ಹಿಮ ಪ್ರವಾಹ ಉಂಟಾಗಿ ಧೌಲಿಗಂಗಾ ನದಿ ಉಕ್ಕಿ ಹರಿದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಹವಾಮಾನ ವೈಪರೀತ್ಯದ ಪರಿಣಾಮ ಎಂದು ಈಗ ಹೇಳಲಾಗುತ್ತಿದ್ದು 2019ರಲ್ಲಿ ಬಹಿರಂಗಗೊಂಡ ವರದಿಯೊಂದು ಇಂಥ ದುರ್ಘಟನೆಗಳ ಬಗ್ಗೆ ಭವಿಷ್ಯ ನುಡಿದಿತ್ತು.

ಚಮೋಲಿ ಜಿಲ್ಲೆಯ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದ್ದೇ ಧೌಲಿಗಂಗಾ ನದಿಯ ಪ್ರವಾಹಕ್ಕೆ ಕಾರಣ. ಕಾಂಚನ ಜುಂಗಾ ಭಾರತದ ಅತೀ ಎತ್ತರದ ಶಿಖರವಾದರೆ ನಂದಾದೇವಿ ಎರಡನೇ ಅತೀ ಎತ್ತರದ ಶಿಖರವಾಗಿದೆ. ವಿಶ್ವದ ತಾಪಮಾನ ಏರಿಕೆಯಿಂದಾಗಿ 21ನೇ ಶತಮಾನದ ಆರಂಭದಿಂದಲೇ ಹಿಮಾಲಯದ ನೀರ್ಗಲ್ಲುಗಳು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ ಎಂದು ಈ ವರದಿ ಎಚ್ಚರಿಸಿತ್ತು.

- Advertisement -
spot_img

Latest News

error: Content is protected !!