Wednesday, October 14, 2026
Homeಉತ್ತರ ಕನ್ನಡಉತ್ತರ ಕನ್ನಡ ಎಸ್ಪಿ ವರ್ಗಾವಣೆ: ನೂತನ‌ ಎಸ್ಪಿ ಆಗಿ ವರ್ತಿಕಾ

ಉತ್ತರ ಕನ್ನಡ ಎಸ್ಪಿ ವರ್ಗಾವಣೆ: ನೂತನ‌ ಎಸ್ಪಿ ಆಗಿ ವರ್ತಿಕಾ

- Advertisement -
- Advertisement -

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಆಗಿದ್ದ ಶಿವಪ್ರಕಾಶ್ ದೇವರಾಜು ವರ್ಗಾವಣೆಗೊಂಡಿದ್ದಾರೆ. ಜಿಲ್ಲೆಯ ನೂತನ ಎಸ್ಪಿ ಆಗಿ ವರ್ತಿಕಾ ಕಟಿಯಾರ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂದು ವರ್ಗಾವಣೆಗೊಂಡಿರುವ ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳ ಪೈಕಿ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಾಗಿದ್ದ ಶಿವಪ್ರಕಾಶ್ ದೇವರಾಜು ಕೂಡಾ ಸೇರಿದ್ದಾರೆ.

ಜಿಲ್ಲೆಗೆ ಹೊಸದಾಗಿ ಎಸ್ಪಿ ಆಗಿ ವರ್ಗಾವಣೆಗೊಂಡಿರುವ ವರ್ತಿಕಾ ಕಟಿಯಾರ್ ಈವರೆಗೆ ರಾಜ್ಯ ಕ್ರೈಂ ರೆಕಾರ್ಡ್ಸ್ ಬ್ಯೂರೋ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವರ್ತಿಕಾ ಈ ಹಿಂದೆ ಕೊಡಗು ಜಿಲ್ಲಾ ಎಸ್ಪಿ ಆಗಿಯೂ ಕೆಲಸ ನಿರ್ವಹಿಸಿದ್ದರು.

- Advertisement -

Latest News

error: Content is protected !!