Wednesday, June 24, 2026
Homeಉತ್ತರ ಕನ್ನಡಉತ್ತರಕನ್ನಡ: ಸಮುದ್ರದಲ್ಲಿ ಆಟವಾಡುತ್ತಿದ್ದ ಸಹೋದರರು ನೀರುಪಾಲು

ಉತ್ತರಕನ್ನಡ: ಸಮುದ್ರದಲ್ಲಿ ಆಟವಾಡುತ್ತಿದ್ದ ಸಹೋದರರು ನೀರುಪಾಲು

- Advertisement -
- Advertisement -

ಉತ್ತರಕನ್ನಡ: ಸಮುದ್ರದಲ್ಲಿ ಆಟವಾಡುತ್ತಿದ್ದ ಸಹೋದರರು ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿ ಬೀಚ್ ನಲ್ಲಿ ಸಂಭವಿಸಿದೆ. ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಮೃತರು.

ಡಿ.18ರಂದು ಕಬ್ಬಡ್ಡಿ ಆಟವಾಡಿದ ಬಳಿಕ ಇಬ್ಬರೂ ಸಂಜೆ ಸಮುದ್ರಕ್ಕೆ ಆಟವಾಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿದ್ದರು. ತೀವ್ರ ಹುಡುಕಾಟದ ಬಳಿಕ ಗುರುವಾರ ತಡರಾತ್ರಿ ಇಬ್ಬರ ಶವಗಳು ಪತ್ತೆಯಾಗಿವೆ.

ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

- Advertisement -

Latest News

error: Content is protected !!