ಮಂಗಳೂರು:ಕೊರೊನಾ ಸೋಂಕಿನಿಂದ ಗುರುವಾರ ಮೃತಪಟ್ಟ ಬಂಟ್ವಾಳ್ದ ವೃದ್ದೆಯ ಶವಸಂಸ್ಕಾರಕ್ಕೆ ಹಲವೆಡೆ ಸ್ಥಳೀಯರು ಸೇರಿದಂತೆ ಜನಪ್ರತಿಧಿಗಳು ಕೂಡಾ ವಿರೋಧಿಸಿದ್ದು, ಇದನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಯು.ಟಿ ಖಾದರ್ , ಉಸ್ತುವಾರಿ ಸಚಿವರು ದಿನಕ್ಕೆರಡು ಬಾರಿ ಮಿಟೀಂಗ್ ಮಾಡುತ್ತಾರೆಯೇ ವಿನಾಃ ಕೋವಿಡ್ ಪೀಡಿತರ ಶವ ಸಂಸ್ಕಾರಕ್ಕೆ ಸಮರ್ಪಕ ವ್ಯವಸ್ಥೆ ಮಾಡದೇ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಿಲ್ಲಾಡಳಿತ ಹಾಗೂ ಶಾಸಕರು ಸಂಸದರು ಅಧಿಕಾರಿಗಳು ಸಭೆಗಳಲ್ಲೆ ಕಾಲ ಕಳೆಯುತ್ತಿದೆಯೇ ಹೊರತು ಯಾವುದೇ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಯಾವ ರೀತಿ ಮೀಟಿಂಗ್ ನಡೆಸಬೇಕಾಗಿತ್ತೋ ಅದೇ ರೀತಿಯ ಮೀಟಿಂಗ್ ಈಗಲೂ ಮಾಡುತ್ತಿದೆ. ಕೊರೊನಾ ಸಂಭಂದಿ ಆರೋಗ್ಯಕರ ಚರ್ಚೆ ಅಗತ್ಯತೆ ಇದೆ.
ಇನ್ನೂ ಇಲ್ಲಿ ನಡೆಯುವ ಚರ್ಚೆಯಲ್ಲಿ ಶಾಸಕರು ಕೇವಲ ಅಂಗಡಿ, ಮೀನು, ರಸ್ತೆ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಾರೆ.ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಸೋತಿದೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರನ್ನು ಮೂವತ್ತೈದು ದಿನ ಮನೆಯಲ್ಲಿ ಇರಿ ಅಂದರೆ ಸಾಲದು.ಆರೋಗ್ಯ ಸಂಬಂಧಿ ಮುಂದಿನ ಕ್ರಮ ಯಾವ ರೀತಿ ಕೈಗೊಂಡಿದ್ದಾರೆ ಎಂಬುದರ ಚರ್ಚೆಯ ಅಗತ್ಯತೆ ಇದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಕೊರೊನಾ ತಾಂಡವವಾಡುತ್ತಿದ್ದರೂ ಜಿಲ್ಲಾಡಳಿತವು ಇನ್ನೂ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾಡಳಿತ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಕೋವಿಡ್ ಪೀಡಿತರ ಶವ ಸಂಸ್ಕಾರದ ವೇಳೇ ಜನರಿಗೆ ಆತಂಕವಾಗೋದು ಸಹಜ. ಆದರೆ ಜಿಲ್ಲಾಡಳಿತವು ಜನರಲ್ಲಿ ಸೂಕ್ತ ರೀತಿಯ ತಿಳಿವಳಿಕೆ ಮೂಡಿಸಬೇಕಿತ್ತು. ನಾನು ಆರೋಗ್ಯ ಸಚಿವನಾಗಿದ್ದಾಗ ಶ್ರದ್ಧಾಂಜಲಿ ಹೆಸರಿನ ಆಂಬುಲೆನ್ಸ್ ಅನ್ನು ಪ್ರತಿ ಜಿಲ್ಲೆಗೊಂದರಂತೆ ಕೊಡಿಸಿದ್ದೆ. ಅದಕ್ಕೆ ಚಾಲಕನನ್ನು ನೇಮಿಸಿ ನಿರ್ವಹಿಸುವ ಕೆಲಸವನ್ನು ಬಳಿಕ ಬಂದಿರುವ ಸರಕಾರ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.