- Advertisement -
- Advertisement -
ಬಂಟ್ವಾಳ: ಅನುಮತಿ ರಹಿತವಾಗಿ ಥರ್ಮಾಮೀಟರ್ ಬಳಸಿ ಜ್ವರ ಪರೀಕ್ಷೆ ನಡೆಸಿದ ಅಧಿಕಾರಿಯೋರ್ವರ ಬಗ್ಗೆ ಅನುಮಾನ ಮೂಡಿಸಿದೆ.
ಬಂಟ್ವಾಳ ಪುರಸಭಾ ಪರಿಸರ ಇಂಜಿನಿಯರ್ ಯಾಸ್ಮೀನ್ ಸುಲ್ತಾನ್ ಎಂಬ ಮಹಿಳಾ ಅಧಿಕಾರಿ ಯೋರ್ವರು ಪುರಸಭೆಯ ಪೌರಕಾರ್ಮಿಕರ ಜ್ವರಪರೀಕ್ಷೆ ನಡೆಸುವ ಮೂಲಕ ವಿವಾದ ಹುಟ್ಟಿಸಿದ್ದಾರೆ.
ಪ್ರತಿಯೊಬ್ಬರ ಪರೀಕ್ಷೆ ನಡೆಸಿದ ಇಂಜಿನಿಯರ್ ಅವರು ಯಾಕೆ ಪರೀಕ್ಷೆ ನಡೆಸಿದ್ದಾರೆ ಎಂಬುದೇ ನಿಗೂಡ. ಸ್ವಚ್ಚತೆಯ ಕಡೆ ಗಮನ ಕೊಡದೆ ಒಬ್ಬರ ಬಾಯಿಯಿಂದ ತೆಗೆದು ಇನ್ನೊಬ್ಬರ ಬಾಯಿಯೊಳಗೆ ಜ್ವರ ಪರೀಕ್ಷೆ ಮಾಡುವ ಥರ್ಮೋಮೀಟರ್ ಬಳಕೆ ಮಾಡಲಾಗುತ್ತದೆ. ಪುರಸಭೆಯ ಮುಖ್ಯಾಧಿಕಾರಿ ಗಮನಕ್ಕೆ ಬರದೆ ಅವರು ಪರೀಕ್ಷೆ ನಡೆಸಿದ್ದಾರೆ ಎಂದು ನೋಟೀಸ್ ಜಾರಿ ಮಾಡಲಾಗಿದೆ.
- Advertisement -