ಸೌಂದರ್ಯಕ್ಕೆ ಇನ್ನೊಂದು ಹೆಸರು ಮಹಿಳೆ ಅಂತಾ ಕವಿಗಳು ಹಾಡಿ ಹೊಗಳಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿ ಕಾಣಬಯಸ್ತಾಳೆ. ಅದಕ್ಕಾಗಿ ಸಾಕಷ್ಟು ಸೌಂದರ್ಯವರ್ಧಕಗಳ ಮೊರೆ ಹೋಗ್ತಾಳೆ. ಆದ್ರೆ ಆ ಊರಿನ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗೋದಿರಲಿ, ಸ್ನಾನ ಕೂಡ ಮಾಡೋದಿಲ್ಲ.
ಆಫ್ರಿಕಾದ ಕುನೌನ್ ಪ್ರಾಂತ್ಯದಲ್ಲಿರುವ ಬುಡಕಟ್ಟು ಜನಾಂಗ ವಿಭಿನ್ನ ಸಂಪ್ರದಾಯವನ್ನು ಪಾಲಿಸಿಕೊಂಡು ಬರ್ತಾ ಇದೆ. ಇಲ್ಲಿನ ಮಹಿಳೆಯರೂ ಸ್ನಾನ ಮಾಡೋದಿಲ್ಲ. ಹಾಗಿದ್ದೂ ಆಫ್ರಿಕಾದ ಸುಂದರ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಇವರು.
ವಿಶೇಷ ಅಂದ್ರೆ ಈ ಜನಾಂಗದ ಮಹಿಳೆಯರು ನೀರನ್ನು ಮುಟ್ಟುವಂತಿಲ್ಲ. ನೀರಿನಲ್ಲಿ ಅವರು ಕೈ ಕೂಡ ತೊಳೆದುಕೊಳ್ಳುವುದಿಲ್ಲ. ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಲೋಷನ್ ಸಿದ್ಧಪಡಿಸಿಕೊಳ್ಳುವ ಅವರು ಅದನ್ನು ಸದಾ ಮೈಗಳಿಗೆ ಹಚ್ಚಿಕೊಳ್ತಾರೆ. ಜೊತೆಗೆ ನೀರಿಗೆ ಕೆಲವೊಂದು ಔಷಧಿ ಸಸ್ಯಗಳನ್ನು ಹಾಕಿ ಕುದಿಸುತ್ತಾರೆ. ಅದ್ರ ಹಬೆಯನ್ನು ತೆಗೆದುಕೊಳ್ಳುವ ಮೂಲಕ ದೇಹ ವಾಸನೆ ಬರದಂತೆ ನೋಡಿಕೊಳ್ತಾರೆ.