Tuesday, September 17, 2024
Homeತಾಜಾ ಸುದ್ದಿಅರ್ಹರಿಗೆ ಮಾತ್ರ ಮೀಸಲಾತಿ: ಸುಪ್ರೀಂ ಕೋರ್ಟ್‌

ಅರ್ಹರಿಗೆ ಮಾತ್ರ ಮೀಸಲಾತಿ: ಸುಪ್ರೀಂ ಕೋರ್ಟ್‌

spot_img
- Advertisement -
- Advertisement -

ನವದೆಹಲಿ: ಮೀಸಲಾತಿ ಪಟ್ಟಿಯನ್ನು ಸಮಯಕ್ಕೆ ತಕ್ಕಂತೆ ಪರಿಷ್ಕರಿಸಬಹುದು. ಮೀಸಲಾತಿ ಎಂಬುದು ಪರಮಪವಿತ್ರವೇನು ಅಲ್ಲ. ಬದಲಿಸಬಾರದೆಂಬುದು ಕೂಡಾ ಇಲ್ಲ. ಶ್ರೀಮಂತರನ್ನು ಹೊರಗಿಟ್ಟು ಮೀಸಲಾತಿಯನ್ನು ಪರಿಷ್ಕರಿಸಬೇಕೆಂದು ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಮೀಸಲಾತಿಯಲ್ಲಿ ಉಳ್ಳವರನ್ನು ಹೊರಗಿಟ್ಟು, ಅಗತ್ಯವಿರುವವರನ್ನು ಹೊಸದಾಗಿ ಸೇರಿಸುವ ಮೂಲಕ ಪಟ್ಟಿಯನ್ನು ಪರಿಷ್ಕರಿಸಬೇಕೆಂದು ಸೂಚಿಸಲಾಗಿದೆ.
ಮೀಸಲಾತಿ ಪಡೆದ ಸಮುದಾಯಗಳಲ್ಲಿ ಎಲ್ಲರಿಗೂ ಅದರ ಲಾಭ ಸಿಗದಿರುವ ಬಗ್ಗೆ ಅವಕಾಶ ವಂಚಿತರಲ್ಲಿ ಅಸಮಾಧಾನ ಇದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ .
ಆಂಧ್ರಪ್ರದೇಶದಲ್ಲಿ 20 ವರ್ಷಗಳ ಹಿಂದೆ ಗುಡ್ಡಗಾಡು ಪ್ರದೇಶಗಳಿಗೆ ಪರಿಶಿಷ್ಟ ಪಂಗಡದ ಶಿಕ್ಷಕರನ್ನು ಮಾತ್ರ ನೇಮಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು.

ಅಂದಿನ ಸರ್ಕಾರ ಮೀಸಲಾತಿಯನ್ನು ಶೇಕಡ 50 ಕ್ಕಿಂತ ಹೆಚ್ಚಿಸಿದ ಕ್ರಮವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು , ಇದನ್ನು ವಿಚಾರಿಸಿದ ಸುಪ್ರೀಂಕೋರ್ಟ್ ಐವರು ಸದಸ್ಯರ ಪೀಠ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮೀಸಲಾತಿ ಲಾಭವನ್ನು ಕೆಲ ಸಮುದಾಯಗಳು ಪಡೆದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬಂದಿವೆ. ಆದರೆ ಸಮುದಾಯದ ಒಳಗೆ ಎಲ್ಲರಿಗೂ ಲಾಭ ದೊರೆತಿಲ್ಲ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತ ಪಡಿಸಿದೆ .

- Advertisement -
spot_img

Latest News

error: Content is protected !!