ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ತೇಜಸ್ವಿನಿ ಪ್ರಕಾಶ್ ಅವರ ತಂದೆ ಅನಾರೋಗ್ಯದಿಂದ ಗುರುವಾರ ಸಂಜೆ ಮೃತಪಟ್ಟಿದ್ದಾರೆ.
ನಟಿ ತೇಜಸ್ವಿನಿ ಅವರ ತಂದೆ ಪ್ರಕಾಶ್ ಅನಾರೋಗ್ಯದಿಂದ ಬಳಲುತ್ತಿದ್ದರು. ಪ್ರಕಾಶ್ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ತಂದೆಯ ಅಗಲಿಕೆ ವಿಚಾರವನ್ನು ತೇಜಸ್ವಿನಿ ಫೇಸ್‍ಬುಕ್ ಮೂಲಕ ನೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ರಿಪ್ ಅಪ್ಪಾ’ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ದುಃಖವನ್ನು ಭರಿಸಿಕೊಳ್ಳವ ಶಕ್ತಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಸಾಂತ್ವನ ಹೇಳಿದ್ದಾರೆ. ಇನ್ನೂ ಅಭಿಮಾನಿಯೊಬ್ಬರು, “ಪ್ರತೀ ಜೀವಿಗೂ ಸಾವು ಇದೆ. ಯಾವತ್ತಾದರೂ ಸಾಯಲೇಬೇಕು. ದೇಹಕ್ಕೆ ವಿಶ್ರಾಂತಿ ಅಷ್ಟೇ ವಿನಾ, ಅವರ ನೆನಪು ಸದಾ ಹಸಿಯಾಗಿ ಇರುತ್ತದೆ” ಎಂದು ಹೇಳಿದ್ದಾರೆ.
ಸದ್ಯಕ್ಕೆ ನಟಿ ತೇಜಸ್ವಿನಿ, ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ 2008ರಲ್ಲಿ ತೆರೆಕಂಡು ‘ಗಜ’ ಸಿನಿಮಾದಲ್ಲಿ ನಟಿಸಿದ್ದರು. ಇನ್ನೂ ಕೆಲವು ಸಿನಿಮಾಗಳಲ್ಲೂ ತೇಜಸ್ವಿನಿ ಅಭಿನಯಿಸಿದ್ದಾರೆ.