Thursday, March 28, 2024
Homeಕರಾವಳಿಅಧಿಕಾರಕ್ಕಿಂತಲೂ ಮಾನವೀಯತೆ ಮುಖ್ಯ ಎಂದು ಸಾಬೀತುಪಡಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಅಧಿಕಾರಕ್ಕಿಂತಲೂ ಮಾನವೀಯತೆ ಮುಖ್ಯ ಎಂದು ಸಾಬೀತುಪಡಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ಎಪ್ರಿಲ್‌ 19 ರಂದು ಮೃತಪಟ್ಟ ಮಹಿಳೆಯ ಸಂಬಂಧಿ ಮಹಿಳೆಯೋರ್ವರು ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ ಆದಿತ್ಯವಾರ ಮೃತ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಕೆಲವು ಜನಪ್ರತಿಧಿಗಳು ವಿರೋಧ ವ್ಯಕ್ತಪಡಿಸಿದ್ದರು.
ನಿನ್ನೆ ಮೃತ ಪಟ್ಟ ಮಹಿಳೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾದಾಗ ಆಡಳಿತ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾಯಿತು. ಅಲ್ಲಿಯೂ ಇದಕ್ಕೆ ವಿರೋಧ ಉಂಟಾದಾಗ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಶಾಸಕ ರಾಜೇಶ್ ನಾಯ್ಕ್ ರವರನ್ನು ಸಂಪರ್ಕಿಸಿತು.
ತಕ್ಷಣವೇ ಮಾನವೀಯತೆ ಮೆರೆದ ಶಾಸಕರು ತನ್ನ ಪತ್ನಿ ಪುತ್ರರಲ್ಲಿ ಮಾತುಕತೆ ನಡೆಸಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ತಿಳಿಸಿದ ಬಳಿಕ ಶವಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದಲ್ಲಿ ತನ್ನ ಸ್ವಂತ ಸ್ಥಳದಲ್ಲಿ ನಾನು ಅವಕಾಶ ನೀಡತ್ತೇನೆ ಇಲ್ಲಿ ತಂದು ಅಂತ್ಯ ಸಂಸ್ಕಾರ ಮಾಡಬಹುದು. ಯಾಕೆಂದರೆ ಮೃತಮಹಿಳೆ ನನ್ನ ಕ್ಷೇತ್ರ ದವರು. ಶವಸಂಸ್ಕಾರಕ್ಕೂ ಅವಕಾಶ ನೀಡದ ದಯನೀಯ ಸ್ಥಿತಿ ನನ್ನ ಕ್ಷೇತ್ರದ ಮಹಿಳೆಗೆ ಬರಬಾರದು ಎಂದರು.

ಶಾಸಕರ ಮಾತಿಗೆ ಜಿಲ್ಲಾಡಳಿತ ದಿಗ್ಬ್ರಮೆಗೊಂಡಿತು. ಶಾಸಕರು ಬೇರೆ ಸ್ಥಳ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಶಾಸಕರ ಈ ಮಾತಿನಿಂದ ಆತ್ಮ ವಿಶ್ವಾಸ ಹೆಚ್ಚಿತು.

ಆದರೆ ಕೊನೆಗೆ ವೃದ್ದ ಮಹಿಳೆಯ ಶವ ಸಂಸ್ಕಾರವನ್ನು ಸ್ಥಳೀಯರ ಭಾರೀ ವಿರೋಧದ ನಡುವೆಯೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬಿ.ಸಿ.ರೋಡ್ ರೈಲು ನಿಲ್ದಾಣ ಸಮೀಪದಲ್ಲಿ ಇರುವ ಕೈಕುಂಜೆ ಹಿಂದೂ ರುದ್ರ ಭೂಮಿಯಲ್ಲಿ ಗುರುವಾರ ತಡ ರಾತ್ರಿ 2 ಗಂಟೆಯ ಸುಮಾರಿಗೆ ನಡೆಸಿದ್ದಾರೆ.


.

- Advertisement -
spot_img

Latest News

error: Content is protected !!