ಬಂಟ್ವಾಳದಲ್ಲಿ ಕೊರೋನಾ ರುದ್ರನರ್ತನ: ಭಾನುವಾರ ಮೃತಪಟ್ಟ ಮಹಿಳೆಯ ಅತ್ತೆ ಇಂದು ಸಾವು

ಬಂಟ್ವಾಳ: ಕಳೆದ ಭಾನುವಾರ ಬಂಟ್ವಾಳ ನಗರದ ಕೆಳಗಿನ ಪೇಟೆಯ 45 ವರ್ಷದ ಮಹಿಳೆ ಕೊರೋನಾಗೆ ತುತ್ತಾಗಿ ಜೀವ ತೆತ್ತಿರುವ ಬೆನ್ನಲ್ಲೇ ಅವರ ಅತ್ತೆ (75 ವರ್ಷ) ಕೂಡ ಇಂದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಸೊಸೆ ಮೃತಪಟ್ಟ ಸಮಯದಲ್ಲಿ ಅತ್ತೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಜಿಲ್ಲೆಯ ವೆನ್ಲಾಕ್ ಕೋವಿದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮೃತಪಟ್ಟ ಅತ್ತೆ ಬಹಳ ಕಾಲದಿಂದ ಪಾರ್ಶ್ವವಾಯುವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಸೋಂಕಿತರ … Continue reading ಬಂಟ್ವಾಳದಲ್ಲಿ ಕೊರೋನಾ ರುದ್ರನರ್ತನ: ಭಾನುವಾರ ಮೃತಪಟ್ಟ ಮಹಿಳೆಯ ಅತ್ತೆ ಇಂದು ಸಾವು