Wednesday, June 3, 2026
Homeತಾಜಾ ಸುದ್ದಿಉಳ್ಳಾಲ ಶಾಸಕ ಯು.ಟಿ ಖಾದರ್ ಕಾರು ಅಪಘಾತ

ಉಳ್ಳಾಲ ಶಾಸಕ ಯು.ಟಿ ಖಾದರ್ ಕಾರು ಅಪಘಾತ

- Advertisement -
- Advertisement -

ದಾವಣಗೆರೆ: ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ದಾವಣಗೆರೆಯ ಆನಗೋಡು ಗ್ರಾಮದ ಬಳಿ ಅಪಘಾತಕ್ಕೊಳಗಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಯ ಪರ ಪ್ರಚಾರ ಕಾರ್ಯ ನಿಮಿತ್ತ ಪ್ರಯಾಣ ಬೆಳಸುತ್ತಿದ್ದ ವೇಳೆ ಯು.ಟಿ. ಖಾದರ್ ಅವರ ಕಾರ್ ಮುಂದೆ ಹೋಗುತ್ತಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ..

ಅಪಘಾತವಾದ ಬಳಿಕ ಯು.ಟಿ. ಖಾದರ್ ಅವರು ಮತ್ತೊಂದು ಕಾರಿನ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

- Advertisement -

Latest News

error: Content is protected !!