Saturday, June 13, 2026
Homeಕರಾವಳಿಸುಳ್ಯ; ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣ; ಕೇರಳದಲ್ಲಿ ಆರೋಪಿಗಳ‌ ಬಂಧನ

ಸುಳ್ಯ; ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣ; ಕೇರಳದಲ್ಲಿ ಆರೋಪಿಗಳ‌ ಬಂಧನ

- Advertisement -
- Advertisement -

ಸುಳ್ಯ; ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣಕ್ಕೆ ಕೇರಳದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಜು.14 ರಂದು ಬೆಳಗ್ಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಜಾಗದ ವಿವಾದದ ಹಿನ್ನೆಲೆಯಲ್ಲಿ ಉಸ್ಮಾನ್ ಎಂಬವರನ್ನು ಅವರ ಸಹೋದರರೇ ಚೂರಿಯಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು. ಇದೀಗ ಆರೋಪಿಗಳಾದ ಸತ್ತಾರ್, ರಫೀಕ್ ಅವರನ್ನು ಬಂಧಿಸಲಾಗಿದೆ ಕೇರಳದಲ್ಲಿ ಕೊಡಗು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಈ ವೇಳೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಕೂಡ ಬಂಧಿಸಲಾಗಿದೆ .

ಕೇರಳಕ್ಕೆ ಆರೋಪಿಗಳು ಪರಾರಿಯಾಗಿರುವ ಮಾಹಿತಿ ಪಡೆದ ಪೊಲೀಸರು ಎರ್ನಾಕುಲಂ ಎಂಬಲ್ಲಿ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಸೈಬರ್ ಪೊಲೀಸರ ಸಹಾಯ ಪಡೆದು ಬಂಧಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!