Friday, June 5, 2026
Homeಕರಾವಳಿಉಡುಪಿಉಡುಪಿ; ಬೈಕಿನಿಂದ ಬಿದ್ದು ಹಿಂಬದಿ ಸವಾರೆ ಸಾವು

ಉಡುಪಿ; ಬೈಕಿನಿಂದ ಬಿದ್ದು ಹಿಂಬದಿ ಸವಾರೆ ಸಾವು

- Advertisement -
- Advertisement -

ಉಡುಪಿ;  ಬೈಕಿನಿಂದ ಬಿದ್ದು ಹಿಂಬದಿ ಸವಾರೆ ಮೃತಪಟ್ಟ ಘಟನೆ ಹೆಬ್ರಿ- ಬ್ರಹ್ಮಾವರ ರಸ್ತೆಯ ಕೊಳಂಬೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೋಟೇಶ್ವರ ನಿವಾಸಿ, ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಲೈಬ್ರೆರಿಯನ್ ಶಾಂಭವಿ ಪಿ.(59) ಮೃತ ದುರ್ದೈವಿ.

ಕಾಲೇಜು ಬಿಟ್ಟ ನಂತರ ಇವರು ಕಾಲೇಜಿನ ಲ್ಯಾಬ್ ಟೆಕ್ನಿಶಿಯನ್ ಸುಧೀಂದ್ರ ಎಂಬವರ ಬೈಕಿ ನಲ್ಲಿ ಬ್ರಹ್ಮಾವರದ ಬಸ್ ನಿಲ್ದಾಣದವರೆಗೆ ಹೊರಟಿದ್ದರು. ಕೊಳಂಬೆ ಬಳಿ ಬರುವಾಗ ಜೋರಾಗಿ ಮಳೆ ಬಂದು ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!