Thursday, June 4, 2026
Homeಚಿಕ್ಕಮಗಳೂರುದಲಿತ ಬಾಲಕನಿಗೆ ಮೂತ್ರ ಕುಡಿಸಿದ ಪ್ರಕರಣ: ಕೊನೆಗೆ ಆರೋಪಿ- ದೂರುದಾರ ರಾಜಿಯಲ್ಲಿ ಮುಕ್ತಾಯ

ದಲಿತ ಬಾಲಕನಿಗೆ ಮೂತ್ರ ಕುಡಿಸಿದ ಪ್ರಕರಣ: ಕೊನೆಗೆ ಆರೋಪಿ- ದೂರುದಾರ ರಾಜಿಯಲ್ಲಿ ಮುಕ್ತಾಯ

- Advertisement -
- Advertisement -

ಚಿಕ್ಕಮಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮೂಡಿಗೆರೆ ಗೋಣಿಬೀಡು ದಲಿತ ಯುವಕನಿಗೆ ಪೊಲೀಸ್ ಠಾಣೆಯಲ್ಲಿ ಮೂತ್ರ ಕುಡಿಸಿ ಅಮಾನವೀಯ ವರ್ತನೆ ಪ್ರಕರಣ ಇದೀಗ ರಾಜಿಯಲ್ಲಿ ಮುಕ್ತಾಯವಾಗಿದೆ.

ಗೋಣಿಬೀಡು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ವಿಚಾರಣೆಗೆಂದು ಪುನೀತ್ ಎಂಬ ದಲಿತ ಬಾಲಕನಿಗೆ ಕರೆತಂದು 2021ರ ಮೇ. 10ರಂದು ಯುವಕನಿಗೆ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರ ನೆಕ್ಕಿಸಿರುವ ಆರೋಪವನ್ನು ಸಂತ್ರಸ್ತ ಪುನೀತ್ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿ ಇನ್ಸ್ ಪೆಕ್ಟರ್ ಬಂಧನವೂ ನಡೆದಿತ್ತು. ದಲಿತ ಸಂಘಟನೆ ಬೀದಿ ಹೋರಾಟ ಮಾಡಿ ಕಠಿಣ ಕ್ರಮಕ್ಕೆ‌ ಆಗ್ರಹಿಸಿತ್ತು.

ಇದೀಗ ಆರೋಪಿ ಅರ್ಜುನ್‌ ಹಾಗೂ ದೂರುದಾರ ಕಿರಗುಂದ ಗ್ರಾಮದ ಪುನೀತ್‌ ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಇದೀಗ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

- Advertisement -

Latest News

error: Content is protected !!