Wednesday, June 3, 2026
Homeತಾಜಾ ಸುದ್ದಿನಾಳೆಯಿಂದ ನಂದಿನಿ ಮೊಸರು, ಮಜ್ಜಿಗೆ ಮತ್ತು ಸಿಹಿ‌ ಲಸ್ಸಿ ದರ ಏರಿಕೆ

ನಾಳೆಯಿಂದ ನಂದಿನಿ ಮೊಸರು, ಮಜ್ಜಿಗೆ ಮತ್ತು ಸಿಹಿ‌ ಲಸ್ಸಿ ದರ ಏರಿಕೆ

- Advertisement -
- Advertisement -

ಬೆಂಗಳೂರು: ನಾಳೆಯಿಂದ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ.‌ ಈ ಕುರಿತು ಕೆಎಂಎಫ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಕೇಂದ್ರ ಸರ್ಕಾರ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್ ಟಿ ‌ವಿಧಿಸಿರುವ ಹಿನ್ನೆಲೆಯಲ್ಲಿ ಕೆಎಂಎಫ್ ದರ ಪರಿಷ್ಕರಣೆ ಮಾಡಿದೆ.

ಮೊಸರು 200 ಗ್ರಾಮ್ ಮತ್ತು 500 ಗ್ರಾಂ ಸ್ಯಾಚೆ ಬೆಲೆ ತಲಾ 2 ರೂಪಾಯಿ, 1000 ಗ್ರಾಂ ಸ್ಯಾಚೆ ಬೆಲೆ 3 ರೂಪಾಯಿ ಏರಿಕೆಯಾಗಲಿದೆ.

ಮಜ್ಜಿಗೆ 200 ಮಿ.ಲೀ ಸ್ಯಾಚೆ, ಟೆಟ್ರಾ ಪ್ಯಾಕ್ ಮತ್ತು ಪೆಟ್ ಬಾಟಲ್ ಬೆಲೆ ತಲಾ 1 ರೂಪಾಯಿ ಹೆಚ್ಚಳವಾಗಲಿದೆ.

ಲಸ್ಸಿ 200 ಮಿ.ಲೀ. ಸ್ಯಾಚೆ, ಟೆಟ್ರಾ ಪ್ಯಾಕ್ ಸಾದ, ಪೆಟ್ ಬಾಟಲ್ ಸಾದ ಮತ್ತು ಪೆಟ್ ಬಾಟಲ್ ಮ್ಯಾಂಗೋ ಬೆಲೆ ತಲಾ 1 ರೂಪಾಯಿ ಏರಿಕೆಯಾಗಿದೆ. ಟೆಟ್ರಾ ಪ್ಯಾಕ್ ಮ್ಯಾಂಗೋ ಬೆಲೆ 2 ರೂಪಾಯಿ ಹೆಚ್ಚಳಗೊಳ್ಳಲಿದೆ.

ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೆಯ ದರ ಮುದ್ರಿತವಾಗಿರುವುದರ ಮೇಲೆ ಪ್ಯಾಕಿಂಗ್ ಸಾಮಾಗ್ರಿಗಳ ದಾಸ್ತಾನು ಮುಗಿಯುವವರೆಗೂ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರಾಟ ಮಾಡಲಾಗುತ್ತದೆ.

- Advertisement -

Latest News

error: Content is protected !!